Sunday, October 17, 2021
spot_imgspot_img
spot_imgspot_img

ಲಯನ್ಸ್ ಕ್ಲಬ್ ಮಾಣಿ ಇದರ ಸೆಪ್ಟೆಂಬರ್ ತಿಂಗಳ ಪಾಕ್ಷಿಕ ಸಭೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

- Advertisement -
- Advertisement -

ಮಾಣಿ: ಲಯನ್ಸ್ ಕ್ಲಬ್ ಮಾಣಿ ಇದರ ಸೆಪ್ಟೆಂಬರ್ ತಿಂಗಳ ಪಾಕ್ಷಿಕ ಸಭೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಇಂದು ಸಂಜೆ ಗಂಟೆ ಸರಿಯಾಗಿ ವಿನಾಯಕ ಕಾಂಪ್ಲೆಕ್ಸ್ ಮಾಣಿಯಲ್ಲಿ ನಡೆಯಿತು.

ಲಯನ್ ಪ್ರಥಮ್ ಜಿ ರೈ ಯವರು ಪ್ರಾರ್ಥನೆ, ಹರೀಶ್ ಕುಲಾಲ್ ಧ್ವಜ ವಂದನೆಗೈದರು. ಕ್ಲಬ್ ಅಧ್ಯಕ್ಷರು ಶಿಕ್ಷಕರ ದಿನಾಚರಣೆ ಬಗ್ಗೆ ಪ್ರಸ್ತಾವಿಕ ಮಾತನಾಡುತ್ತ ಎಲ್ಲರನ್ನು ಸ್ವಾಗತಿಸಿದರು, ಉಮೇಶ್ ಪಿ ಯವರು 2020-21 ಲೆಕ್ಕ ಪತ್ರ ಮಂಡಿಸಿದರು.

ಗುರು ವಂದನಾ ಕಾರ್ಯಕ್ರಮದಲ್ಲಿ B. M. ಗಂಗಾಧರ್ ರವರು ಶಿಕ್ಷಕರ ಹಾಗೂ ಸೈನಿಕರ ಸೇವೆಯನ್ನು ಕೊಂಡಾಡಿ ಮಾತಾಡಿದರು. ನಂತರ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ B. K. ಭಂಡಾರಿ, ಜಿಲ್ಲಾ ಮಟ್ಟದ ಅತುತ್ತಮ ಶಿಕ್ಷಕಿ ಶ್ರೀಮತಿ ಸುಚೇತ ರವರನ್ನು Ln. ಪ್ರಹಾಲ್ಲದ ಶೆಟ್ಟಿ, ಮೋಹನದಾಸ್ ಶೆಟ್ಟಿ ಯವರು ಸನ್ಮಾನ ಪತ್ರ ಓದುವುದರೊಂದಿಗೆ ವೇದಿಕೆ ಗಣ್ಯರು ಸನ್ಮಾನಿಸಿದರು. ಹಾಗೂ ಹಿರಿಯ ಶಿಕ್ಷಕರಾದ ಮಹಾಬಲ ಮತ್ತು ಸದಾನಂದ ರವರನ್ನು ಗುರುತಿಸಲಾಯಿತು. ಸನ್ಮಾನ ಸ್ವೀಕರಿದ ಶಿಕ್ಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷರು Dr. ಶ್ರೀನಾಥ್ ಆಳ್ವಾ, ಕಾರ್ಯದರ್ಶಿ ನಾರಾಯಣ ಸಾಲಿಯಾನ್, ಕೋಶಾಧಿಕಾರಿ ರತ್ನಾಕರ ರೈ, zone chairman ಗಂಗಾಧರ ರೈ ನಿಕಟಪೂರ್ವ ಅಧ್ಯಕ್ಷರು ಬಾಲಕೃಷ್ಣ ಶೆಟ್ಟಿ ಪಿ, ಉಪಸ್ಥಿತರಿದ್ದರು.

Ln. ರತ್ನಾಕರ ರೈ ಯವರು ಹುಟ್ಟುಹಬ್ಬ, ಮದುವೆ ಸಂಭ್ರಮ ಆಚರಿಸಿದ ಸದಸ್ಯರ ಹೆಸರು ಸೂಚಿಸಿದರು ಕ್ಲಬ್ ಅಧ್ಯಕ್ಷರು ಗುಲಾಬಿ ಹೂ ನೀಡಿದರು. Host ನೀಡಿದ Ln. Dr ಮನೋಹರ ರೈ, ಉಮೇಶ್ m ಶೆಟ್ಟಿ, ರಾಜೇಶ್ ಶೆಟ್ಟಿ ಯವರನ್ನು ಕ್ಲಬ್ ಅಧ್ಯಕ್ಷರು ಗೌರವಿಸಿದರು. ಕ್ಲಬ್ ಅಧ್ಯಕ್ಷರು 2020-21ರ ಸಾಲಿನಲ್ಲಿ ಲಯನ್ಸ್ ಜಿಲ್ಲೆಯಿಂದ ಲಭಿಸಿದ ಪುರಸ್ಕಾರಗಳನ್ನ ನಿಕಟ ಪೂರ್ವ ಅಧ್ಯಕ್ಷರಿಗೆ. ಕಾರ್ಯದರ್ಶಿ, ಕೋಶಾಧಿಕಾರಿ. ಜಿಲ್ಲಾ ಸಂಯೋಜಕರಿಗೆ ನೀಡಿದರು ಹಾಗೂ ಕ್ಲಬ್ಬಿಗೆ ಸಿಕ್ಕಿದ ಪುರಸ್ಕಾರ ಕ್ಕೆ ನಿಕಟ ಪೂರ್ವ ಅಧ್ಯಕ್ಷರನ್ನು ಕೊಂಡಾಡಿದರು. Ln. ನಾರಾಯಣ ಸಾಲಿಯಾನ್ ಧನ್ಯವಾದ ಸಮರ್ಪಿಸಿದರು ರಾಷ್ಟ್ರ ಗೀತೆಯೊಂದಿಗೆ ಉಟೋಪಚಾರಕ್ಕೆ ಸಭೆಯನ್ನು ಅಧ್ಯಕ್ಷರು ಮುಂದೂಡಿದರು.

- Advertisement -
- Advertisement -

MOST POPULAR

HOT NEWS

Related news

error: Content is protected !!