- Advertisement -
- Advertisement -



ವಿಟ್ಲ : ಎರುಂಬು ಶ್ರೀ ವಿಷ್ಣುಮೂರ್ತಿ ಸೇವಾ ಸಂಘದ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅರ್ಧ ಏಕಾಹ ಭಜನಾ ಸೇವೆಯು ಎ.23 ರಂದು ಎರುಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ.
ವಸಂತ ಪೂಜೆಯ ನಂತರ ಸಂಜೆ 6 ಗಂಟೆಗೆ ಯಕ್ಷಗುರು ಶ್ರೀ ಉಂಡೆಮನೆ ಕೃಷ್ಣಭಟ್ಟರ ನಿರ್ದೇಶನದಲ್ಲಿ “ಮಹಿಷಮರ್ದಿನಿ” ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -