- Advertisement -
- Advertisement -
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಕಲ್ಲಡ್ಕ ಶಾಖೆಯು ಪ್ರಾರಂಭಗೊಂಡು 25 ವರ್ಷಗಳನ್ನು ಪೂರೈಸಿದ ಪ್ರಯುಕ್ತ ಇಂದು ಬೆಳಗ್ಗೆ ಶಾಖೆಯಲ್ಲಿ ಗಣಪತಿ ಹವನ ನೆರವೇರಿಸುವುದರೊಂದಿಗೆ ಸಂಭ್ರಮಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಜಗನ್ನಾಥ ಸಾಲಿಯಾನ್, ಹೆಚ್, ಉಪಾಧ್ಯಕ್ಷರಾದ ಶ್ರೀ ಮೋಹನ್ ಕೆ.ಎಸ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಶ್ರೀ ವಿಶ್ವನಾಥ ಎಂ. ಶ್ರೀ ಉದಯಕುಮಾರ್.ಎ. ಶ್ರೀ ಗೋವರ್ಧನ್ ಕುಮಾರ್ ಐ, ಶ್ರೀ ದಿವಾಕರ ಎ ಶ್ರೀಮತಿ ಜಯಂತಿ.ಹೆಚ್ ರಾವ್, ಶ್ರೀಮತಿ ಶುಭಲಕ್ಷ್ಮಿ ಹಾಗೂ ಬ್ಯಾಂಕಿನ ಕಟ್ಟಡದ ಮಾಲೀಕರಾದ ಶ್ರೀ ತಿರುಮಲೇಶ್ವರ ಭಟ್ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕೃಷ್ಣ ಮುರಳಿ ಶ್ಯಾಮ್. ಕೆ ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

- Advertisement -








