Sunday, June 7, 2026
spot_imgspot_img
spot_imgspot_img

ವಿಟ್ಲ: ಬೋರ್‌ವೆಲ್‌ ಗಾಡಿ – ಆಕ್ಟೀವಾ ಡಿಕ್ಕಿ; ಓರ್ವ ಸ್ಪಾಟ್ ಡೆತ್

- Advertisement -
- Advertisement -
vtv vitla

ವಿಟ್ಲ: ಬೋರ್‌ವೆಲ್‌ ಗಾಡಿ – ಆಕ್ಟೀವಾ ಡಿಕ್ಕಿ ಹೊಡೆದು ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ. ವಿಟ್ಲದ ಉಕ್ಕುಡ ಅಪ್ಪೇರಿಪಾದೆ ಎಂಬಲ್ಲಿ ಈ ಘಟನೆ ನಡೆದಿದೆ. ರಂಜಿತ್ (20) ಮೃತಪಟ್ಟ ಯುವಕ.

ಪಣೋಲಿಬೈಲು ಮೂಲದ ಯುವಕ ವಿಟ್ಲ ಆಲಂಗಾರು ಎಂಬಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದ. ಅಲ್ಲಿಂದಲೇ ಲಾರಿಗೆ ಕಲ್ಲು ಲೋಡ್‌ ಮಾಡಲು ಹೋಗುತ್ತಿದ್ದ ಎನ್ನಲಾಗಿದೆ. ಆಕ್ಟೀವಾದಲ್ಲಿದ್ದ ಇನ್ನೋರ್ವ ಸವಾರನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ.

ಮೃತಪಟ್ಟ ಯುವಕ
- Advertisement -

Related news

error: Content is protected !!