

ವಿಟ್ಲ: ಸಾಲೆತ್ತೂರಿನಲ್ಲಿ ಕೊರಗಜ್ಜ ದೈವದ ವೇಷ ಧರಿಸಿದ ಮದುಮಗನಿಗೆ ಇದೀಗ ಮುಸ್ಲಿಂ ಸಮುದಾಯದವರೇ ತಿರುಗಿಬಿದ್ದಿದ್ದಾರೆ. ಉಮರುಲ್ ಬಾಶಿತ್ ನ ಬಟ್ಟೆಯ ಅಂಗಡಿ ಎನ್ನಲಾದ ಪುತ್ತೂರಿನಲ್ಲಿರುವ ಫಾತಿಮಾ ಸೆಂಟರ್ ಗೆ ಮುಸ್ಲಿಂ ಭಾಂದವರೇ ತೆರಳಬಾರದು ಎನ್ನುವ ವಿಡಿಯೋ ವೈರಲ್ ಆಗಿದ್ದು,ಕೊರಗ ಸಮುದಾಯದ ಅಪಹಾಸ್ಯ ಮಾಡುವಾತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ವಿಟ್ಲ: ಮುಸ್ಲಿಂ ಸಮುದಾಯದ ಮದುವೆ ಸಂಭ್ರಮದಲ್ಲಿ ಕೊರಗಜ್ಜನ ವೇಷ ಧರಿಸಿ ಡಾನ್ಸ್ ಮಾಡಿದ ವರ.?
ಕೇರಳ ಉಪ್ಪಳದ ನಿವಾಸಿಯಾದ ಉಮರುಲ್ ಬಾಶಿತ್ ಕೊರಗಜ್ಜ ದೈವದ ಅಪಹಾಸ್ಯ ಮಾಡಿ ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೇ ಸ್ವತ: ಮುಸ್ಲಿಂ ಸಮುದಾಯವೂ ಕೂಡಾ ಈ ಘಟನೆಯನ್ನು ವಿರೋಧಿಸಿದೆ. ಅಷ್ಟೂ ಅಲ್ಲದೇ ಪುತ್ತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿರುವ ಫಾತಿಮಾ ಡ್ರೆಸ್ ಸೆಂಟರ್ ಕೂಡಾ ಈತನದ್ದೆಂಬುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ವಿಟ್ಲ: ಮದುಮಗನಿಂದ ಕೊರಗಜ್ಜನಿಗೆ ಅವಮಾನ; ಮದುಮಗನ ಮನೆಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರು










