- Advertisement -
- Advertisement -
ವಿಟ್ಲ: ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ ಇದರ ನೇತೃತ್ವದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಪ್ರತೀ ಸೋಮವಾರ ಸಂಜೆ ಘಂಟೆ 5ರಿಂದ 7ರ ವರೆಗೆ ಭಜನಾ ಸೇವೆ ಮುಂದಿನ ದಿನಗಳಲ್ಲಿ ಜರುಗಲಿದೆ.

ಪರಿಷತ್ತಿನ ಅಧ್ಯಕ್ಷರಾದ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಇವರು ಭಜನಾ ಸೇವೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಪರಿಷತ್ತಿನ ವತಿಯಿಂದ ಭಜನಾ ಸೇವೆ ನಡೆಯಿತು.

ಮುಂದಿನ ವಾರದಿಂದ ಒಂದೊಂದು ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದ್ದು, ಭಜನಾ ಸೇವೆ ನಡೆಸಿಕೊಡಬಯಸುವ ಭಜನಾ ತಂಡಗಳು ಭಜನಾ ಪರಿಷತ್ತಿನ ಈ ಕೆಳಗಿನ ಪದಾಧಿಕಾರಿಗಳನ್ನು ಸಂಪರ್ಕಿಸಬೇಕಾಗಿ ಭಜನಾ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. . ಭಾಸ್ಕರ ಕಾಮಟ 7349491924, ಕಾರ್ತಿಕ್ ಕೈಂತಿಲ 9611820397.ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು; ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ.



- Advertisement -