Monday, November 2, 2026
spot_imgspot_img
spot_imgspot_img

ಸಾರಾಯಿ ಕುಡಿಯಲು ಹಣ ಕೊಡಲು ನಿರಾಕರಿಸದ ಗೆಳೆಯನ ಬರ್ಬರ ಹತ್ಯೆ!

- Advertisement -
- Advertisement -

ಮುಂಬೈ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ಸಾರಾಯಿ ಕುಡಿಯಲು 10 ರೂ. ಕೊಡಲು ನಿರಾಕರಿಸಿದ ವ್ಯಕ್ತಿಯನ್ನು ಆತನ ಇಬ್ಬರು ಸ್ನೇಹಿತರು ಕೊಲೆ ಮಾಡಿದ ಘಟನೆ ನಡೆದಿದೆ.

ಮೃತ ವ್ಯಕ್ತಿ ಭಗವತ್ ಸೀತಾರಾಮ್ (50) ಎಂದು ಗುರುತಿಸಲಾಗಿದೆ. ಆತನ ಆರೋಪಿ ಸ್ನೇಹಿತರಾದ ವಿನೋದ್ ಲಕ್ಷ್ಮಣ್ ವಾಂಖೆಡೆ (40) ಮತ್ತು ದಿಲೀಪ್ ತ್ರ್ಯಂಬಕ್ ಬೊಡ್ಡೆ (35) ಕೊಲೆಗೈದ ಆರೋಪಿಗಳು.

ಮೂವರು ಸ್ನೇಹಿತರು ಒಟ್ಟಿಗೆ ಮದ್ಯದಂಗಡಿಗೆ ಕುಡಿಯಲು ಹೋಗಿದ್ದರು. ಈ ವೇಳೆ ವಿನೋದ್ ಲಕ್ಷ್ಮಣ್ ವಾಂಖೆಡೆ ಮತ್ತು ದಿಲೀಪ್ ತ್ರ್ಯಂಬಕ್ ಮದ್ಯ ಕುಡಿಯಲು ಸೀತಾರಾಮ್ ನಿಂದ 10 ರೂ. ಕೇಳಿದ್ದಾರೆ. ಆದರೆ ಸೀತಾರಾಂ ಅವರಿಗೆ ಹಣ ನೀಡಲು ನಿರಾಕರಿಸಿದ್ದಾನೆ.

ಬಳಿಕ ಸೀತಾರಾಮ್ ಅಂಗಡಿಯಿಂದ ಹೊರಗೆ ಹೋಗುತ್ತಿದ್ದಾಗ ಆರೋಪಿಗಳು ಮರದ ದೊಣ್ಣೆಯಿಂದ ಆತನ ತಲೆಗೆ ಹಿಂದಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಭಗವತ್ ಸೀತಾರಾಮ್ ಮೃತಪಟ್ಟಿದ್ದಾರೆ. ಘಟನೆ ನಡೆದ ಒಂದು ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!