Sunday, May 5, 2024
spot_imgspot_img
spot_imgspot_img

ಅದಾನಿ ಕಂಪನಿಗೆ ಮಂಗಳೂರು ಏರ್​ಪೋರ್ಟ್​ ಗುತ್ತಿಗೆ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿ ಹೊಣೆಯನ್ನು, ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ಗೆ ಗುತ್ತಿಗೆಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್​ ತೀರ್ಪನ್ನ ಕಾಯ್ದಿರಿಸಿದೆ.

ನೌಕರರ ಸಂಘದ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ವಾದ ಮಂಡಿಸಿ, 50 ವರ್ಷಗಳ ಈ ಗುತ್ತಿಗೆಯಿಂದ ಸರ್ಕಾರಕ್ಕೆ ಬಾರಿ ದೊಡ್ಡ ನಷ್ಟವಾಗಲಿದೆ. ಎಟಿಸಿ ಸೇವೆ ಹೊರತುಪಡಿಸಿ ಬಹುತೇಕ ಎಲ್ಲಾ ಸೇವೆಗಳ ಹಸ್ತಾಂತರ ಮಾಡಲಾಗಿದ್ದು, ರಿಯಾಯಿತಿ ಒಪ್ಪಂದ ಏಕಪಕ್ಷೀಯವಾಗಿದೆ ಎಂದು ದೂರಿದ್ದಾರೆ.

ಪ್ರತಿವಾದಿಯಾಗಿ ಏರ್​ಪೋರ್ಟ್ ಅಥಾರಿಟಿ ಪರ ಸಂತೋಷ್ ನಾಗರಾಳೆ ವಾದ ಮಂಡಿಸಿದ್ದು, ಇದಕ್ಕೆ ಬಿಡ್ ಆಹ್ವಾನಿಸಿಯೇ ಗುತ್ತಿಗೆಗೆ ನೀಡಲಾಗಿದ್ದು, 18 ಸೇವೆಗಳ ಪೈಕಿ 7 ಸೇವೆ ಮಾತ್ರ ಗುತ್ತಿಗೆಗೆ ನೀಡಲಾಗಿದೆ ಎಂದಿದ್ದಾರೆ. ಸದ್ಯ ವಾದ-ಪ್ರತಿವಾದಗಳನ್ನ ಆಲಿಸಿದ ಹೈಕೋರ್ಟ್​ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ.

driving
- Advertisement -

Related news

error: Content is protected !!