Saturday, May 18, 2024
spot_imgspot_img
spot_imgspot_img

ಆತ್ಮಹತ್ಯೆ ಮಾಡಿಕೊಳ್ಳಲು ಮೆಟ್ರೋ ಸ್ಟೇಶನ್​ ಗೋಡೆ ಹತ್ತಿದ ಯುವತಿ; ಆಕೆಗೆ ತಿಳಿಯದಂತೆ ಕಾಪಾಡಿದ ಪೊಲೀಸ್​; ವಿಡಿಯೋ ವೈರಲ್

- Advertisement -G L Acharya panikkar
- Advertisement -

ಮೆಟ್ರೋ ಸ್ಟೇಶನ್​​ನ ಎತ್ತರದ ಗೋಡೆಯೊಂದನ್ನು ಹತ್ತಿ, ಅಲ್ಲಿಂದ ಹಾರಲು ಯತ್ನಿಸುತ್ತಿದ್ದ ಯುವತಿಯನ್ನು ಅದೇ ಸ್ಟೇಶನ್​​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವು ಪೊಲೀಸ್​ ಸಿಬ್ಬಂದಿ ಸರಿಯಾದ ಸಮಯದಲ್ಲಿ ರಕ್ಷಿಸಿದ್ದಾರೆ. ದೆಹಲಿ ಸಮೀಪದ ಫರಿದಾಬಾದ್​ನಲ್ಲಿರುವ ಮೆಟ್ರೋಸ್ಟೇಶನ್​ನಲ್ಲಿ ಘಟನೆ ನಡೆದಿದ್ದು, 45 ಸೆಕೆಂಡ್​​ಗಳ ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್ ಆಗಿದೆ.

ಆ ಯುವತಿ ಮೆಟ್ರೋಸ್ಟೇಶನ್​ನ ಸೆಕ್ಟರ್​ 28ರ ಗೋಡೆಯ ಮೇಲೆ ಕುಳಿತಿದ್ದಳು. ಆಕೆಯ ಮನವೊಲಿಸಲು ಹಲವರು ಪ್ರಯತ್ನಿಸುತ್ತಿದ್ದರು. ಮೆಟ್ರೋ ಸ್ಟೇಶನ್​ನ ಸೆಕ್ಯೂರಿಟಿ ಸಿಬ್ಬಂದಿಯೂ ಆಕೆಯ ಬಳಿ ಸುರಕ್ಷಿತವಾಗಿ ಕೆಳಗೆ ಬರುವಂತೆ ಕೇಳಿಕೊಳ್ಳುತ್ತಿದ್ದರು. ಆದರೆ ಆಕೆ ಅಲ್ಲೇ ಮೌನವಾಗಿ ಕುಳಿತಿದ್ದಳು.

ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿಯೂ ಅಲ್ಲಿ ಬಂದಿದ್ದಾರೆ. ಅದರಲ್ಲಿ ಕಾನ್​ಸ್ಟೆಬಲ್​ ಒಬ್ಬರು, ಆಕೆಗೆ ಗೊತ್ತಾಗದಂತೆ ಸುಮ್ಮನೆ ಆಕೆ ಇದ್ದ ಸ್ಥಳಕ್ಕೆ ಹೋಗಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಪೊಲೀಸ್​ ಕಾನ್​ಸ್ಟೆಬಲ್​ ಬಂದಿದ್ದು ಹುಡುಗಿಗೆ ಗೊತ್ತಾಗಲೇ ಇಲ್ಲ. ಅವರು ಹಿಡಿದುಕೊಂಡ ಬಳಿಕ, ಇನ್ನೊಬ್ಬರು ಮೇಲಿನಿಂದಲೇ ಬಂದು ಆಕೆಯನ್ನು ಹಿಡಿದು ಆಕೆಯನ್ನು ರಕ್ಷಿಸಿದ್ದಾರೆ.

ಹುಡುಗಿಯನ್ನು ಯಶಸ್ವಿಯಾಗಿ ರಕ್ಷಿಸಿದ ಕಾನ್​ಸ್ಟೆಬಲ್​ ಸರ್ಫ್​ರಾಜ್​ ಅವರನ್ನು ಪೊಲೀಸ್ ಕಮಿಷನರ್​ ಒಪಿ ಸಿಂಗ್ ಶ್ಲಾಘಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರೂ ಫುಲ್ ಖುಷಿ ವ್ಯಕ್ತಪಡಿಸಿದ್ದಾರೆ. ಅವರ ಸಮಯಪ್ರಜ್ಞೆಗೆ ದೊಡ್ಡ ಸಲಾಂ ಎಂದಿದ್ದಾರೆ. ಈ ವಿಡಿಯೋ ನೋಡಿ..

- Advertisement -

Related news

error: Content is protected !!