Sunday, April 28, 2024
spot_imgspot_img
spot_imgspot_img

ಆಮ್‌ ಆದ್ಮಿ ಪಕ್ಷಕ್ಕೆ ಅಧೀಕೃತವಾಗಿ ಸೇರ್ಪಡೆಯಾದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್; ಮೊದಲ ಸುದ್ದಿಗೋಷ್ಠಿಯಲ್ಲೇ ಬಿಚ್ಚಿಟ್ಟ ಮಹತ್ವದ ವಿಷಯಗಳೇನು..?

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ನೈತಿಕತೆಯೇ ಇಲ್ಲ ಒಬ್ಬರನ್ನೊಬ್ಬರು ಆರೋಪ ಮಾಡುವುದರಲ್ಲೇ ಮುಳುಗಿದ್ದಾರೆ. ಒಂದೊಂದು ಹುದ್ದೆಗೂ ಇಲ್ಲಿ ಕೋಟ್ಯಂತರ ಹಣ ಕೊಡಬೇಕಾಗಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಇಂದಿಲ್ಲಿ ಕಿಡಿಕಾರಿದ್ದಾರೆ. ಆಮ್ ಆದ್ಮಿ ಪಕ್ಷದ ಸೇರ್ಪಡೆ ನಂತರ ಪ್ರೆಸ್‍ಕ್ಲಬ್‍ನಲ್ಲಿಂದು ಮಾಧ್ಯಮ ಸಂವಾದ ನಡೆಸಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕಳೆದ ಮೂರು ದಶಕಗಳಿಂದ ಜನಪ್ರತಿನಿಗಳನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ನನ್ನ ಸೇವಾ ಅವಧಿಯಲ್ಲಿ ರಾಜ್ಯದ ವಿದ್ಯಮಾನಗಳನ್ನು ಚೆನ್ನಾಗಿ ಅರಿತಿದ್ದೇನೆ ಎಂದರು.

ಕೊರೊನಾ ಸಂದರ್ಭದಲ್ಲಿ ಜನರ ಕಷ್ಟವನ್ನು ಹತ್ತಿರದಿಂದ ನೋಡಿದ್ದೇನೆ. ಕೋಟ್ಯಂತರ ಹಣ ಖರ್ಚು ಮಾಡುತ್ತಾರೆ. ಜನರ ಪರಿಸ್ಥಿತಿ ಬದಲಾವಣೆ ಆಗಲೇ ಇಲ್ಲ. ಎಲ್ಲವೂ ಕಾಗದದ ಮೇಲೆ ಸೀಮಿತವಾಗಿತ್ತು. ಎಲ್ಲವೂ ಟೊಳ್ಳು ಭರವಸೆಯಾಗಿಯೇ ಉಳಿದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಾಯಕತ್ವದ ಕೊರತೆ ಇದೆ. ಉತ್ತಮವಾಗಿ ಮಾತನ್ನಾಡುವ ನಾಯಕರ ಬಂಡವಾಳವನ್ನು ಮುಂದೆ ಬಿಚ್ಚಿಡುತ್ತೇನೆ ಎಂದು ಅವರು ಹೇಳಿದರು. ಕೇಸ್ ದಾಖಲಿಸುವುದು, ಅಪರಾಗಳ ಜೊತೆ ಶಾಮೀಲಾಗೋದೇ ಆಗಿದೆ. ಇದೆಲ್ಲವನ್ನೂ ನೋಡಿ ಸಾಕಾಗಿದೆ. ನನಗೆ ಇನ್ನೂ ಮೂರು ವರ್ಷ ಅವಧಿ ಇತ್ತು. ಆದರೂ ವ್ಯವಸ್ಥೆಯಿಂದ ಬೇಸತ್ತು ನಿವೃತ್ತಿ ತೆಗೆದುಕೊಂಡಿದ್ದೇನೆ ಎಂದರು.

ಮುಂದೆ ನನ್ನ ಮನೆ ಮೇಲೆ ದಾಳಿಯಾಗಬಹುದು. ಏನೇ ಆದರೂ ಎದುರಿಸಲು ಸಿದ್ಧನಿದ್ದೇನೆ. ಇದೂವರೆಗೂ ಒಂದು ಕಪ್ಪು ಚುಕ್ಕೆ ನನ್ನ ಮೇಲಿಲ್ಲ. ನನ್ನ ಮೇಲೂ ಆರೋಪಗಳನ್ನ ಮಾಡುತ್ತಾರೆ. ಏನೇ ಆರೋಪ ಮಾಡಿದರೂ ಎದುರಿಸಲು ಸಿದ್ಧನಿದ್ದೇನೆ ಎಂದರು. ಪ್ರತಿಯೊಬ್ಬ ಅಧಿಕಾರಿ ಭಯದಿಂದ ಬದುಕುವಂತಾಗಿದೆ. ದಲ್ಲಾಳಿ ದಂಧೆ ಮಾಡಿಕೊಂಡೇ ಹಣ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಒಳ್ಳೆಯ ಅಧಿಕಾರಿಗಳಿಗೆ ಅವಕಾಶವೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಆಗ ಪೋಲಿಸ್ ಅಧಿಕಾರಿಯಾಗಿದ್ದೆ. ಆಗ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನ್ನಾಡಲು ಸಾಧ್ಯವೇ ? ಅದೇ ಕಾರಣಕ್ಕೆ ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದೇನೆ. ಈಗ ಧೈರ್ಯವಾಗಿ ಅದನ್ನು ಹೇಳುತ್ತಿದ್ದೇನೆ ಎಂದು ಹೇಳಿದರು. ಹಿಜಾಬ್, ಹಲಾಲ್, ಆಜಾನ್ ವಿವಾದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲರೂ ಒಂದೇ ಭಾರತೀಯರು. ಬೆಲೆ ಏರಿಕೆಯಿಂದ ಜನರು ಸಾಯುತ್ತಿದ್ದಾರೆ. ಅದಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ಅದೇ ಕಾರಣಕ್ಕೆ ವಿಷಯಾಂತರ ಮಾಡಲು ವಿವಾದಗಳು ಸೃಷ್ಟಿಯಾಗುತ್ತಿವೆ ಎಂದು ಕಿಡಿಕಾರಿದರು.

ರಾಜಕಾರಣಿಗಳಿಗೆ ಹಣವೊಂದು ಬೇಕು ಅಷ್ಟೇ. ದುಡ್ಡಲ್ಲಿ ನಮ್ಮ ಪಕ್ಷ ಬಡತನ ಇರಬಹುದು. ವಿಚಾರಗಳಲ್ಲಿ ಶ್ರೀಮಂತಿಕೆ ಇದೆ. ಬೇರೆಲ್ಲಾ ಪಕ್ಷಗಳಲ್ಲಿ ಯಾರ್ಯಾರು ಪ್ರಾಮಾಣಿಕರಿದ್ದಾರೋ ಅವರೆಲ್ಲಾ ನಮ್ಮ ಪಕ್ಷಕ್ಕೆ ಬರಲಿ ಎಂದರು. ಟಿಕೆಟ್ ಸಿಗದಿದ್ದಲ್ಲಿ ನಮ್ಮ ಪಕ್ಷದಲ್ಲಿ ಪ್ರಾಮಾಣಿಕರಿಗೆ ಅವಕಾಶ ನೀಡುತ್ತೇವೆ. ಮುಂಬರುವ ದಿನಗಳಲ್ಲಿ ನಮ್ಮ ಪಕ್ಷ ಎಲ್ಲಾ ಕಡೆ ಗೆಲ್ಲಲಿದೆ ಎಂದು ಹೇಳಿದರು.

ಪ್ರಮಾಣಿಕರಿಗೆ ಮಾತ್ರ ಪಕ್ಷಕ್ಕೆ ಆಹ್ವಾನ ಇರಲಿದೆ. ಭ್ರಷ್ಟರನ್ನ ಪಕ್ಷಕ್ಕೆ ಸೇರಿಸಿಕೊಳ್ಳೋದಿಲ್ಲ. ಯಾವುದೇ ಪಕ್ಷದಲ್ಲಿ ಪ್ರಮಾಣಿಕರಿದ್ದರೂ ಪಕ್ಷಕ್ಕೆ ಬಂದರೆ ಸ್ವಾಗತ ಸಿಗಲಿದೆ. ಚುನಾವಣೆ ಯಾವಾಗ ಬೇಕಾದರೂ ನಡೆಯಲಿ. ಅದಕ್ಕೆ ನಾವು ಸಿದ್ಧರಾಗಿದ್ದೇವೆ. ನಾನು ಬೆಂಗಳೂರಿನವನು. ಪಕ್ಷ ಎಲ್ಲಿ ಹೇಳಲಿದೆಯೋ ಅಲ್ಲಿ ಸ್ಪರ್ಧಿಸುತ್ತೇನೆ. ಆದರೂ ನಾನು ಮೂಲತಃ ಬೆಂಗಳೂರಿನವನು ಬಹಳ ಜನ ಪೋಲಿಸ್ ಅಧಿಕಾರಿಗಳು ನನ್ನ ಸಂಪರ್ಕದಲ್ಲಿ ಇದ್ದಾರೆ. ಉಸಿರು ಕಟ್ಟುವ ವಾತಾವರಣದಲ್ಲಿ ಇರುವ ಪೊಲೀಸರು ಸಂಪರ್ಕದಲ್ಲಿ ಇದ್ದಾರೆ. ರಾಜಕಾರಣಿಗಳು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಮುಂದಿನ ದಿನಗಳಲ್ಲಿ ನೋಡುತ್ತಾ ಇರಿ. ನನಗೆ ಎಲ್ಲಾ ಪಕ್ಷಗಳು ಆತ್ಮೀಯರು ಇದ್ದಾರೆ. ಕಾಂಗ್ರೆಸ್, ಬಿಜೆಪಿ ಎಲ್ಲಾ ಪಕ್ಷಗಳಲ್ಲೂ ಇದ್ದಾರೆ ಎಂದು ಮಾಹಿತಿ ನೀಡಿದರು.

- Advertisement -

Related news

error: Content is protected !!