- Advertisement -
- Advertisement -


ಬೆಂಗಳೂರು: ಆಸಿಡ್ ದಾಳಿಗೆ ಒಳಗಾಗಿದ್ದ ಯುವತಿಗೆ ಬೆಂಗಳೂರಿನ ಐವರು ಪೊಲೀಸರು ರಕ್ತದಾನ ಮಾಡಿದ್ದಾರೆ. ಏಪ್ರಿಲ್ 28ರಂದು ಕಾಮಾಕ್ಷಿಪಾಳ್ಯದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿ ಮೇಲೆ ನಾಗೇಶ್ ಅಲಿಯಾಸ್ ನಾಗ ಎಂಬಾತ ದಾಳಿ ನಡೆಸಿದ್ದನು.
ಆಸಿಡ್ ದಾಳಿಗೆ ಒಳಗಾಗಿದ್ದಂತೆ ಸಂತ್ರಸ್ತೆಗೆ ಮೂರು ಸರ್ಜರಿ ನಡೆದಿದ್ದು, ಈ ವೇಳೆ ರಕ್ತದಾನ ಮಾಡಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಎಂ.ಪ್ರಶಾಂತ್, ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರ್ ವಿಶ್ವನಾಥ್ ರೆಡ್ಡಿ, ಚಂದ್ರಯ್ಯ, ಮೋಹನ್ ಕುಮಾರ್ ಮತ್ತು ನಟರಾಜ್ ಅವರು ರಕ್ತದಾನ ಮಾಡಿದ್ದಾರೆ. ಒಟ್ಟು ಐದು ಯುನಿಟ್ ರಕ್ತದಾನ ಮಾಡಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.
ಇನ್ನೂ ಪೊಲೀಸರು ರಕ್ತದಾನ ಮಾಡಿರೋದಕ್ಕೆ ಸೇಂಟ್ ಜಾನ್ಸ್ ಆಸ್ಪತ್ರೆ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವತಿಗೆ ಇದುವರೆಗೂ ಮೂರು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
- 3.71 ಲಕ್ಷ ಬಿಲ್ ಪಾವತಿಗೆ ಲಂಚ ಪಡೆಯುವಾಗ ಲೋಕಾ ದಾಳಿ-ಇಬ್ಬರು ಅರೆಸ್ಟ್
- ಶಿವಮೊಗ್ಗ: ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಬಸ್ – 17 ಮಂದಿ ಪ್ರಯಾಣಿಕರು ಸೇಫ್
- ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕರಿಸುವುದಿಲ್ಲ- ಸಿಎಂ ಡಿ.ಕೆ.ಶಿವಕುಮಾರ್
- ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಎರಡು ಪ್ರತ್ಯೇಕ ಪ್ರಕರಣಗಳ ಆರೋಪಿಗಳ ಬಂಧನ
- ದೆಹಲಿಯ ಜಂತರ್ ಮಂತರ್ನಲ್ಲಿ ʻಕಾಕ್ರೋಚ್ ಜನತಾ ಪಾರ್ಟಿʼ ಯಿಂದ ಪ್ರತಿಭಟನೆ


- Advertisement -








