Thursday, May 2, 2024
spot_imgspot_img
spot_imgspot_img

ಈಜಲು ಹೋದ ಮೆಡಿಕಲ್ ಕಾಲೇಜು ವಿದ್ಯಾರ್ಥಿ ದುರಂತ ಅಂತ್ಯ..! – ಆರು ತಿಂಗಳ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಮತ್ತೆ ಆಘಾತ

- Advertisement -G L Acharya panikkar
- Advertisement -

ಆರು ತಿಂಗಳ ಹಿಂದಷ್ಟೇ ಕುಟುಂಬದ ಆಧಾರ ಸ್ತಂಭವಾಗಿದ್ದ ಮನೆ ಯಜಮಾನನನ್ನು ಕಳೆದುಕೊಂಡಿದ್ದ ಕುಟುಂಬದಲ್ಲಿ ಮತ್ತೆ ಸೂತಕದ ಛಾಯೆ ಮೂಡಿದೆ. ಈಜಲು ಹೋಗಿದ್ದ ಮನೆ ಮಗ ಮುಳುಗಿ ಅಸುನೀಗಿದ ಘಟನೆ ನಡೆದಿದೆ. ಕೆರೆಯ ಆಳ ಗೊತ್ತಿಲ್ಲದೆ ಐವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಕೆರೆಯಲ್ಲೇ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ನಗರದ ಹೊರ ವಲಯದಲ್ಲಿ ನಡೆದಿದೆ.

ಮೈಸೂರು ಮೂಲದ ವಿದ್ಯಾರ್ಥಿ ನೋಮನ್ ಪಾಷಾ ಮೃತ ವಿದ್ಯಾರ್ಥಿ. ರಜಾದಿನ ಹಿನ್ನೆಲೆ ನೋಮನ್ ಪಾಷಾ ಮತ್ತು ಸ್ನೇಹಿತರು ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಚೌಡಮ್ಮನ ಕೆರೆಗೆ ಈಜಲು ಹೋಗಿದ್ದಾರೆ. ಕೆರೆಯಲ್ಲಿ ಯಾವ ಪ್ರದೇಶದಲ್ಲಿ ಎಷ್ಟು ಆಳ ಇದೆ ಎನ್ನುವುದನ್ನು ತಿಳಿದುಕೊಳ್ಳದೇ ಈಜಲು ಹಾರಿದ್ದಾರೆ. ಕೆರೆಯ ಆಳ ಹಾಗೂ ಕಲ್ಲು ಬರಿತ ಪ್ರದೇಶದಲ್ಲಿ ಜಿಗಿದ ಪರಿಣಾಮ ನೋಮನ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

ಹೊಸ ವೈದ್ಯಕೀಯ ಕಾಲೇಜು ಪ್ರಾರಂಭವಾಗಿ, ಮೊದಲ ಬ್ಯಾಚ್‌ಗೆ ತರಗತಿ ಆರಂಭವಾಗಿತ್ತು. 15 ದಿನಗಳು ಕಳೆಯುವಾಗಲೇ ಇಂತಹ ದುರಂತ ಸಂಭವಿಸಿದೆ. ಕಾಲೇಜಿಗೆ ಪ್ರವೇಶ ಪಡೆದಿದ್ದ ಮೈಸೂರು ಮೂಲದ ವಿದ್ಯಾರ್ಥಿ ನೋಮನ್ ಪಾಷಾ ತಾನು ತಂಗಿರುವ ಹಾಸ್ಟೆಲ್ ಬಳಿಯ ಕೆರೆಗೆ ಈಜಲು ಹೋದಾಗ ಮುಳುಗಿ ಸಾವನ್ನಪ್ಪಿದ್ದಾನೆ.

ಕಳೆದ 6 ತಿಂಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿದ್ದ ನೋಮನ್ ಪಾಷಾ, ಡಾಕ್ಟರ್ ಆಗಿ ತಾಯಿ, ತಮ್ಮ ಹಾಗೂ ತಂಗಿಯನ್ನು ಸಾಕಬೇಕು ಅಂತಾ ಕನಸು ಕಂಡಿದ್ದ. ತನ್ನ ತಾಯಿ ಮಗನ ಓದಿಗಾಗಿ ಸಾಲ ಮಾಡಿ 68 ಸಾವಿರ ಹಣ ಕೊಟ್ಟಿದ್ದರು. ಆದ್ರೆ ಈಗ ಸಾಲ ಮಾಡಿದ ಹಣದ ಜೊತೆಗೆ ಮಗನೂ ಇಲ್ಲವಾಗಿದ್ದಾನೆ. ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Related news

error: Content is protected !!