Monday, July 27, 2026
spot_imgspot_img
spot_imgspot_img

ಉಡುಪಿ: ಕಾಲೇಜಿನಲ್ಲಿ ಶಿಕ್ಷಕಿಗೆ “ಅಸಮಂಜಸ “ಪದ ಬಳಕೆ; ಹಿಜಾಬ್‌ಧಾರಿ ವಿದ್ಯಾರ್ಥಿನಿಯ ವಿಡಿಯೋ ವೈರಲ್!

- Advertisement -
- Advertisement -

ಹಿಜಾಬ್ ವಿವಾದವು ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ಈ ನಡುವೆ ಉಡುಪಿಯ ಕಾಲೇಜೊಂದರಲ್ಲಿ ಗಲಾಟೆ ಸಂದರ್ಭ ಹಿಜಾಬ್‌ಧಾರಿ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕಿಗೆ ಹೇಳಿದ ಅವಹೇಳನಕಾರಿ ಮಾತು ಇರುವ ವಿಡಿಯೋ ವೈರಲ್ ಆಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳವಾರ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಇರುವುದು ಏನೆಂದರೆ, ಹಿಜಾಬ್, ಬುರ್ಖಾ ಹಾಕಿಕೊಂಡು ಬಂದ ಕೆಲ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಗಲಾಟೆ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ನಯನಾ ಎಂಬ ಶಿಕ್ಷಕಿ ಮಕ್ಕಳನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಯಾರೂ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುವ ದೃಶ್ಯವಿದೆ.ಈ ಸಂದರ್ಭದಲ್ಲಿ ಅಲ್ಲಿಯೇ ಕೂಗಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಮುಟ್ಟಿ, ‘ಗಲಾಟೆ ಮಾಡಬೇಡಿ ಎಂದಿದ್ದಾರೆ.

ಅದಕ್ಕೆ ಸಿಟ್ಟಿಗೆದ್ದ ಆ ವಿದ್ಯಾರ್ಥಿನಿ, ‘ಬುಲ್ ಶಿಟ್’ ಎಂಬ ಶಬ್ದ ಪ್ರಯೋಗ ಮಾಡಿದ್ದೂ ಅಲ್ಲದೇ, ‘ಡೋಂಟ್ ಟಚ್’ ಎಂದು ಶಿಕ್ಷಕಿಗೆ ಹೇಳಿದ್ದಾಳೆ. ತಾವು ಶಿಕ್ಷಣ ನೀಡುತ್ತಿರುವ ವಿದ್ಯಾರ್ಥಿನಿ ಈ ರೀತಿಯ ಕೆಟ್ಟ ಪದ ಪ್ರಯೋಗಿಸಿದ್ದು, ಒಂದು ಕ್ಷಣ ಶಿಕ್ಷಕಿಯನ್ನು ವಿಚಲಿತರನ್ನಾಗಿ ಮಾಡಿದೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ವಿದ್ಯಾರ್ಥಿನಿಯ ಈ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

- Advertisement -

Related news

error: Content is protected !!