Saturday, June 6, 2026
spot_imgspot_img
spot_imgspot_img

ಉಡುಪಿ: ಲಾರಿ – ಬೈಕ್ ಢಿಕ್ಕಿಯಾಗಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು..!

- Advertisement -
- Advertisement -

ಉಡುಪಿ: ಲಾರಿ ಮತ್ತು ಬೈಕ್ ಢಿಕ್ಕಿಯಾಗಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಉಡುಪಿಯ ಬೈಂದೂರು ತಾಲೂಕಿನ ಹೊಸಂಗಡಿ ಕೆರೆಕಟ್ಟೆ ಬಳಿ ನಡೆದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ ಮತ್ತೋರ್ವನಿಗೆ ಗಾಯಗಳಾಗಿದೆ.

ಸೃಜನ್ ನಾಗರಾಜ್ ನಾಯ್ಕ್ ಮೃತ ವಿದ್ಯಾರ್ಥಿ. ಸಹಸವಾರ ದಿವಾಕರ ನಾಯ್ಕ್ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿ.

ಗಂಗಾನಾಡಿನಿಂದ ಹೊಸಂಗಡಿ ಅಜ್ಜಿ ಮನೆಗೆ ಬಂದಿದ್ದ ಐಟಿಐ ವಿದ್ಯಾ ರ್ಥಿ ಸೃಜನ್ ಇಂದು ಬೆಳಗ್ಗೆ ಸಂಬಂಧಿಕ ದಿವಾಕರ ಜತೆ ಬೈಕಲ್ಲಿ ತೆರಳುತ್ತಿರುವಾಗ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!