Friday, April 19, 2024
spot_imgspot_img
spot_imgspot_img

ಉಡುಪಿ: ವಿದ್ಯಾರ್ಥಿಗಳ ಅಪಹರಣ ಪ್ರಕರಣ; ನಾಲ್ವರ ತಂಡ ಪೋಲಿಸ್ ಬಲೆಗೆ..!

- Advertisement -G L Acharya panikkar
- Advertisement -

ಉಡುಪಿ: ಕ್ಯಾಟರಿಂಗ್ ಉದ್ಯೋಗ ಮುಗಿಸಿ ಮಣಿಪಾಲ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಬಂದ ತಂಡವೊಂದು ಅಪಹರಣ ಮಾಡಿ, ಹಲ್ಲೆ ನಡೆಸಿ ದರೋಡೆ ಮಾಡಿದ ಘಟನೆ ಮಂಗಳವಾರ ತಡರಾತ್ರಿ ನಗರದ ಕಲ್ಸಂಕ ಜಂಕ್ಷನ್ ಬಳಿ ನಡೆದಿದೆ. ನಾಲ್ಕು ಮಂದಿಯ ತಂಡ ಈ ಅಪಹರಣ ಮತ್ತು ದರೋಡೆ ಯತ್ನ ನಡೆಸಿದ್ದು, ಉಡುಪಿ ನಗರ ಠಾಣಾ ಪೋಲಿಸರು ತಂಡದವರನ್ನು ವಶಕ್ಕೆ ಪಡೆದಿದ್ದಾರೆ.

ಮಣಿಪಾಲದ ಉಡುಪಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಾದ ಬ್ರೈಟಿಲ್ ಬಿಜು ಮತ್ತು ಮಹಮ್ಮದ್ ಸಿನಾನ್ ಕರಾವಳಿ ಬೈಪಾಸ್ ಬಳಿಯಿರುವ ಹೋಟೆಲಿನಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಮಣಿಪಾಲದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಲ್ಸಂಕ ಜಂಕ್ಷನ್ ಬಳಿ ಕರಾವಳಿ ಬೈಪಾಸ್ ಕಡೆಯಿಂದ ಬಂದ ಕೆಎ -01-ಎಂಎ-5287 ನೋಂದಣಿ ಸಂಖ್ಯೆಯ ಕಾರಿಗೆ ಕೈ ತೋರಿಸಿ ಡ್ರಾಪ್ ಕೇಳಿದ್ದಾರೆ.

ಈ ವೇಳೆ ಚಾಲಕ ಕಾರು ನಿಲ್ಲಿಸಿದ್ದು, ಕಾರಿನಲ್ಲಿ ಚಾಲಕ ಸೇರಿ ನಾಲ್ವರು ಇದ್ದರು. ಈ ವೇಳೆ ಕಾರಿನೊಳಗಿಂದ ವಾಸನೆ ಬಂದಿದ್ದು, ಕಾರಿನಲ್ಲಿ ತೆರಳಲು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ. ಆಗ ಕಾರಿನಲ್ಲಿದ್ದ ಒಬ್ಬತಾ ಇಳಿದು ಚೂರಿ ತೋರಿಸಿ, ಕಾರಿನಲ್ಲಿ ಕುಳಿತುಕೊಳ್ಳದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ವಿದ್ಯಾರ್ಥಿಗಳಿಬ್ಬರನ್ನು ಅಪಹರಣ ಮಾಡಿದ್ದಾರೆ. ನಂತರ ವಿದ್ಯಾರ್ಥಿಗಳ ಮೊಬೈಲ್ ಕಿತ್ತುಕೊಂಡು ದೊಡ್ಡಣಗುಡ್ಡೆಯ ಪಾರ್ಕ್‌ನಲ್ಲಿ ಇಬ್ಬರಿಗೆ ಹಲ್ಲೆ ನಡೆಸಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಒಬ್ಬಾತ ತಪ್ಪಿಸಿಕೊಂಡು ಬಂದು ಠಾಣೆಯಲ್ಲಿ ದೂರು ನೀಡಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿಯನ್ನು ಕಾಪು, ಶಿರ್ವದಲ್ಲಿ ಸುತ್ತಾಡಿಸಿ ಕಾರಿನಲ್ಲೇ ಹಲ್ಲೆ ನಡೆಸಿದ್ದಾರೆ. ಶಿರ್ವ ಬಳಿ ಪೋಲಿಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!