Wednesday, June 17, 2026
spot_imgspot_img
spot_imgspot_img

ಉಡುಪಿ: ಸೀತಾ ನದಿಯಲ್ಲಿ ತೇಲಿ ಬಂದ ಹಸುಗೂಸುವಿನ ಮೃತದೇಹ!

- Advertisement -
- Advertisement -

ಉಡುಪಿ: ಇಲ್ಲಿನ ಕೊಕ್ಕರ್ಣೆ ಸೀತಾನದಿಯಲ್ಲಿ ಗಂಡು ಮಗುವಿನ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.

ಸೀತಾನದಿಯಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಕೊಕ್ಕರ್ಣೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಜ್ವತ್ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿದಾಗ ಮಗು ಕೇವಲ ಒಂದು ದಿನದಾಗಿತ್ತು.

ಅಲ್ಲದೇ ಮುಖ ಹಾಗೂ ತಲೆಯ ಭಾಗ ಜಲಚರಗಳು ತಿಂದು ಕೊಳೆತ ಸ್ಥಿತಿಯಲ್ಲಿ ಇದ್ದು, ಮಗುವಿನ ಹೊಕ್ಕುಳ ಬಳ್ಳಿ ಕೂಡ ಮೃತದೇಹದೊಂದಿಗೆ ಇತ್ತು ಎನ್ನಲಾಗಿದೆ. ಮಗುವಿನ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದಾಗ ಮಗುವಿನ ವಾರಿಸುದಾರರು ಯಾರೂ ಪತ್ತೆಯಾಗಿರುವುದಿಲ್ಲ. ಈ ಕುರಿತು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!