Wednesday, April 24, 2024
spot_imgspot_img
spot_imgspot_img

ಉಪ್ಪಿನಂಗಡಿ: ಬಜರಂಗದಳದ ಕಾರ್ಯಕರ್ತನ ಮೇಲೆ‌ ಮೂವರು ಪೋಲೀಸರಿಂದ ಮಾರಣಾಂತಿಕ ಹಲ್ಲೆ ಪ್ರಕರಣ; ಪೋಲೀಸರ ಮೇಲೆ ಎಫ್.ಐ.ಆರ್. ದಾಖಲಿಸಲು ಜಿಲ್ಲಾವರಿಷ್ಠಾರಿಧಿಕಾರಿಯ ಆದೇಶ; ಎಸ್.ಪಿ. ಕಛೇರಿಗೆ ಮೂವರ ವರ್ಗಾವಣೆ

- Advertisement -G L Acharya panikkar
- Advertisement -
driving

ಉಪ್ಪಿನಂಗಡಿ: ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯಿಂದ 10 ಅಕ್ಟೋಬರ್ ಭಾನುವಾರ ರಾತ್ರಿ ಜಗದೀಶ್ ಎಂಬ ವಿಶ್ವ ಹಿಂದು ಪರಿಷತ್, ಬಜರಂಗದಳದ ಕಾರ್ಯಕರ್ತನನ್ನು ಠಾಣೆಗೆ ವಿನಾಕಾರಣ ಕರೆದುಕೊಂಡು ಹೋಗಿ, ದೈಹಿಕ ದೌರ್ಜನ್ಯ ನಡೆಸಿದ್ದಾರೆ. ಯಾವುದೊ ಒಂದು ಘಟನೆಯನ್ನು ಕಾರಣವಾಗಿ ಮುಂದಿಟ್ಟುಕೊಂಡು ರಾತ್ರಿ ಪೂರ್ತಿ ಠಾಣೆಯಲ್ಲಿ ಕೂಡುಹಾಕಿ ಬಟ್ಟೆಕಳಚಿ ಠಾಣೆಯ ಸಿಬ್ಬಂದಿಗಳಾದ ಪ್ರತಾಪ್, ಸಂಗಯ್ಯ ಮತ್ತು ಶೇಖರ್ ಎಂಬವರು ದೊಣ್ಣೆಯಿಂದ ಹೊಡೆದು, ಬೂಟ್ ಕಾಲಿನಿಂದ ಹೊಡೆದದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುತ್ತಾರೆ ಹಾಗೂ 11 ಅಕ್ಟೋಬರ್ ಸೋಮವಾರ ಸಂಜೆ ಅವರನ್ನು ಠಾಣೆಯಿಂದ ಬಿಟ್ಟು ಕಳಿಸಿದ್ದು, ಆ ಸಂದರ್ಭದಲ್ಲಿ ಅವರು ನಡೆಯಲಾಗದೆ ತುಂಬಾ ಅಸ್ವಸ್ಥಗೊಂಡಿದ್ದು ಚಿಕಿತ್ಸೆಗಾಗಿ ವೆನ್ ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

ನಿರಪರಾಧಿಯಾದ ಜಗದೀಶನ ಮೇಲೆ ವಿನಾಕಾರಣ ದೈಹಿಕವಾಗಿ ಹಲ್ಲೆ ನಡೆಸಿದ ಸಿಬ್ಬಂದಿಗಳಾದ ಪ್ರತಾಪ್, ಸಂಗಯ್ಯ ಮತ್ತು ಶೇಖರ್ ಎಂಬವರ ಮೇಲೆ ತಕ್ಷಣ ಕೇಸು ದಾಖಲಿಸಿ ಕಾನೂನುಕ್ರಮ ಕೈಗೊಂಡು ಅವರನ್ನು ಕೆಲಸದಿಂದ ವಜಾ ಮಾಡಬೇಕಾಗಿ ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ವಿಶ್ವಹಿಂದೂ ಪರಿಷತ್ ಮನವಿ ಸಲ್ಲಿಸಿತ್ತು ಹಾಗೂ ವೆನ್ ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಗದೀಶ್ ಅವರನ್ನು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ಉಪಾಧ್ಯಕ್ಷರಾದ ಭಾಸ್ಕರ್ ಧರ್ಮಸ್ಥಳ, ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಭೇಟಿ ಮಾಡಿ ಧೈರ್ಯ ದುಂಬಿದ್ದರು.

ಈಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾವರಿಷ್ಠಾರಿಧಿಕಾರಿಗಳು, ಉಪ್ಪಿನಂಗಡಿ ಪೋಲೀಸ್ ಸಿಬ್ಬಂದಿಗಳ ಮೇಲೆ ಎಫ್.ಐ.ಆರ್. ದಾಖಲಿಸುವಂತೆ ಆದೇಶ ನೀಡಿದ್ದು, ಸದ್ರಿ ಪ್ರಕರಣ ತನಿಖೆ ಪೂರ್ಣಗೊಳ್ಳುವವರೆಗೂ ಮೂವರನ್ನು ಎಸ್.ಪಿ. ಕಛೇರಿಗೆ ವರ್ಗಾವಣೆ ಮಾಡಿದ್ದಾರೆ.

- Advertisement -

Related news

error: Content is protected !!