Tuesday, June 9, 2026
spot_imgspot_img
spot_imgspot_img

ಉಳ್ಳಾಲ: ಒಂಟಿ ಬಂಗಲೆಗೆ ನುಗ್ಗಿದ ದರೋಡೆಕೋರರು; ಲಕ್ಷಾಂತರ ಮೌಲ್ಯದ ಸೊತ್ತು ಕಳವು!

- Advertisement -
- Advertisement -
driving

ಉಳ್ಳಾಲ: ರಬ್ಬರ್ ತೋಟಗಳ ಮಧ್ಯೆ ಇರುವ ಒಂಟಿ ಬಂಗಲೆಗೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಇಲ್ಲಿನ ಬಬ್ಬುಕಟ್ಟೆ ಸಮೀಪದ ಚಂದಪ್ಪ ಎಸ್ಟೇಟ್ ನಲ್ಲಿ ನಡೆದಿದೆ. ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 5 ಹಿತ್ತಾಳೆಯ ದೀಪಗಳು ಕಳವಾಗಿದೆ ಎಂದು ತಿಳಿದುಬಂದಿದೆ.

ದುಬೈನಲ್ಲಿ ವಾಸವಿರುವ ಸುಜಾತ ಎಂಬವರಿಗೆ ಸೇರಿದ ಒಂಟಿ ಬಂಗಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಮನೆಯ ಹಿಂಬಾಗಿಲನ್ನು ಮುರಿದು ಕಳ್ಳತನ ನಡೆಸಲಾಗಿದೆ ಎನ್ನಲಾಗಿದೆ‌. ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳವಾದ ಸೊತ್ತಿನ ಮೌಲ್ಯ 1.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!