Tuesday, May 7, 2024
spot_imgspot_img
spot_imgspot_img

ಎರುಂಬು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ತುಳಸಿಪೂಜೆ ಹಾಗೂ ಏಕಾಹ ಭಜನೆ

- Advertisement -G L Acharya panikkar
- Advertisement -

ಮನುಷ್ಯನು ಧರಿಸಿಕೊಳ್ಳಬೇಕಾದ ಅತಿ ಮುಖ್ಯ ನಿತ್ಯ ಆಭರಣಗಳು ಕಾಯಕ, ಅನ್ನ, ಒಳ್ಳೆಯ ಸಂಬಂಧ ಹಾಗೂ ದೈವ ದೇವರ ಪ್ರಾರ್ಥನೆ. ದೇವನೊಬ್ಬನೇ ನಾಮ ಹಲವು, ಎಂಬುದೇ ದೇವರೊಳಗಿನ ಸಹಮತದ ಅಂತಾರಾರ್ಥ
ಹೀಗೆಂದು ನಂಬಿ ಶ್ರೀ ವಿಷ್ಣುಮೂರ್ತಿ (ಮಂಗಲ )ದೇವಸ್ಥಾನ ಎರುಂಬು ಇಲ್ಲಿ ಏಕಾಹ (ಪ್ರಾಥಕಾಲ 6.00ಗಂಟೆಯಿಂದ ಸಂಧ್ಯಾಕಾಲ 6.00ರ ವರೆಗೆ) ಭಕ್ತಿಸಂಕೀರ್ತನ ಕಾರ್ಯಕ್ರಮ ಜರಗಿತು.

ತುಳಸಿ ಪೂಜಾ ಕಾರ್ಯಕ್ರಮದ ಬಾಬ್ತು ನಡೆದ ಈ ಕಾರ್ಯಕ್ರಮ ಸೂರ್ಯೋದಯಕ್ಕಿಂತ ಮೊದಲೇ ಬಾಲಗಣಪತಿ ಪೂಜೆಯೊಂದಿಗೆ ಆರಂಭಗೊಂಡಿತು. ಅನೇಕ ಭಕ್ತರು ಭಾವುಕರಾಗಿ ತಮ್ಮ ಬೇಡಿಕೆಗಳನ್ನು ಭಗವತ್ಮುಖ ಹವನದ ಮುಂದೆ ಬೇಡಿಕೊಂಡರು. ಭಜನಾ ಕಾರ್ಯಕ್ರಮದ ಉದ್ಘಾಟನೆ ಶ್ರೀ ಸಂಜೀವಪೂಜಾರಿ ಮಾಲಕರು ಶ್ರೀ ದುರ್ಗಾಪರಮೇಶ್ವರಿ ರೋಡ್ ಲೈನ್ಸ್ ಉಕ್ಕುಡ ಇವರು ನೆರವೇರಿಸಿಕೊಟ್ಟರು.

ಸುಮಾರು 12 ಭಜನಾ ತಂಡಗಳು ಸಂಕೀರ್ತನ ಕಾರ್ಯಕ್ರಮ ನಡೆಸಿಕೊಟ್ಟರು. ವಿಜೃಂಭಣೆಯಿಂದ ನಡೆದ ಭಜನಾ ಮಂಗಲೋತ್ಸವದ ಬಳಿಕ ಶ್ರೀ ದೇವರಿಗೆ ಕಾರ್ತಿಕಪೂಜೆ ಹಾಗೂ ಸರ್ವಭಕ್ತರಿಂದ ಬೆಳಕಿನ ಹಣತೆಯು ಉರಿಸಲ್ಪಟ್ಟು,ತುಳಸಿ ಪೂಜೆಯು ನಡೆದು ಬೆಳಕಿನ ಹಬ್ಬದಲ್ಲಿ ಶ್ರೀ ತುಳಸಿಯ ಕೃಪಕಟಾಕ್ಷ ಹಾಗೂ ಶ್ರೀ ವಿಷ್ಣುವಿನ ಮಹಾಪೂಜೆ ನಡೆಯಿತು.

ಬೆಳಗಿನಿಂದ ನಡೆದ ಫಲಾಹಾರ ಮದ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸೇಕ್ಸೋಫೋನ್ ವಾದಕ ಅಳಿಕೆ ಗ್ರಾಮದ ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಡಾ. ಪಿ. ಕೆ. ದಾಮೋದರ್, ಹಾಗೂ ಸಮಿತಿಯ ಸದಸ್ಯರಾದ ರಾಧಾಕೃಷ್ಣ ಕುಲಾಲ್ ರವರ ಸೇವೆಯನ್ನು ಗುರುತಿಸಿ ವಿಷ್ಣುಮಂಗಲ ಸೇವಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಅರ್ಚಕ ಬಾಲಕೃಷ್ಣ ಕಾರಂತರ ಪೌರೋಹಿತ್ಯದೊಡನೆ ನಡೆದ ವೈದಿಕ ಕಾರ್ಯಕ್ರಮದಲ್ಲಿ, ವಿಟ್ಲ ಅರಮನೆಯ ಸದಸ್ಯರು, ಊರ ಪರವೂರ ಹತ್ತು ಸಮಸ್ತರು, ಹಾಗೂ ಶ್ರೀ ವಿಷ್ಣುಮಂಗಲ ಸೇವಾಸಮಿತಿ, ಸುಜ್ಞಾನ ಮಹಿಳಾ ಮಂಡಳಿ ಸದಸ್ಯರು ಸಹಕರಿಸಿದರು.

- Advertisement -

Related news

error: Content is protected !!