Sunday, April 28, 2024
spot_imgspot_img
spot_imgspot_img

ಏಕಾಏಕಿ ಕಪ್ಪಾದ ನೀರು; ಸಾವಿರಾರು ಜಲಚರಗಳು ಸಾವು

- Advertisement -G L Acharya panikkar
- Advertisement -

ಇಟಾನಗರ: ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆಯ ಕಮೆಂಗ್ ನದಿಯಲ್ಲಿ ಸಾವಿರಾರು ಜಲಚರಗಳು ಸತ್ತು ಬಿದ್ದಿದೆ. ನದಿಯ ನೀರು ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದ ನಂತರ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಒಟ್ಟು ಕರಗಿದ ವಸ್ತುಗಳ ಹೆಚ್ಚಿನ ಅಂಶದಿಂದಾಗಿ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಜಿಲ್ಲಾ ಮೀನುಗಾರಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ನೀರಿನಲ್ಲಿ ಟಿಡಿಎಸ್ ಅಂದರೆ ಖನಿಜ ಲವಣಾಂಶಗಳು ಹೆಚ್ಚಿನ ಪ್ರಮಾಣ ದಲ್ಲಿರುವುದು ಮೀನುಗಳ ಸಾವುಗಳಿಗೆ ಕಾರಣ. ಇದು ನೀರಿನಲ್ಲಿ ಕಡಿಮೆ ಗೋಚರತೆ ಹಾಗೂ ಜಲಚರಗಳಿಗೆ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದರು.

- Advertisement -

Related news

error: Content is protected !!