Thursday, April 18, 2024
spot_imgspot_img
spot_imgspot_img

ಕನ್ಯಾನ: (ಫೆ.3 – ಫೆ.7) ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಚಂಡಿಕಾಯಾಗ

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶ್ರೀ ಚಾಮುಂಡೇಶ್ವರೀ ದೇವಿ ಕಣಿಯೂರು ಕ್ಷೇತದಲ್ಲಿ ಫೆ.3ರಿಂದ ಫೆ.7ರವರೆಗೆ ಪರಮಪೂಜ್ಯ ಶ್ರೀ ಮಹಾಬಲ ಸ್ವಾಮಿಯವರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ವೇದಮೂರ್ತಿ ನಡಿಬೈಲ್ ಶ್ರೀ ಶಂಕರನಾರಾಯಣ ಭಟ್ ಇವರ ನೇತೃತ್ವದಲ್ಲಿ ಶ್ರೀ ಚಾಮುಂಡೇಶ್ವರಿ ಮಾತೆಯ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಚಂಡಿಕಾಯಾಗ ನಡೆಯಲಿದೆ.

ಫೆ. 3ರಂದು ಹಸಿರುವಾಣಿ ಶೋಭಾಯಾತ್ರೆ, ಉಗ್ರಾಣ ಮುಹೂರ್ತ, ಧಾರ್ಮಿಕ ಸಭಾ ಕಾರ್ಯಕ್ರಮ, ಹಾಗೂ ಸಂಜೆ 6.30ಕ್ಕೆ ಮಯಾವಿ ಶ್ರೀ ಡಾನ್ ಟೈಲರ್ ವಿಟ್ಲ ಇವರಿಂದ “ಜಾದೂ ಪ್ರದರ್ಶನ” ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಫೆ. 4ನೇ ಶುಕ್ರವಾರ ವಿವಿಧ ವೈದಿಕ ಕಾರ್ಯಕ್ರಮಗಳು ಮತ್ತು ಸಂಜೆ 6.00 ರಿಂದ ಕಲಾ ಬದುಕು ಸಂಸ್ಥೆಯಿಂದ ರಾಜ್ಯದ ವಿವಿಧ ಭಾಗದ ಪ್ರಶಸ್ತಿ ವಿಜೇತ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು “ಶಿವತಾಂಡವ ನೃತ್ಯ” ಹಾಗೂ ಶ್ರೀ ಗೋಪಾಲ ಕೃಷ್ನ ಯಕ್ಷಗಾನ ಕಲಾಸಮಘ ಕನ್ಯಾನ ಇವರಿಂದ “ವೀರ ತರಣಿ ಸೇನ, ಮಹಿಷಮರ್ಧಿನಿ” ಯಕ್ಷಗಾನ ಬಯಲಾಟ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.

ಫೆ.5ನೇ ಶನಿವಾರ ವೈದಿಕ ಕಾರ್ಯಕ್ರಮಗಳು, ಹಾಗೂ ಸಂಜೆ 5.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಹಾಗೂ ಮಧ್ಯಾಹ್ನ 2.00ರಿಂದ ಶ್ರೀ ಟಿ.ಕೆ ಭಟ್, ನಯನ ಗೌರಿ ಸೇರಾಜೆ ಮತ್ತು ಬಳಗದವರಿಂದ ಭಕ್ತಿ ಪುಷ್ಪಾರ್ಚನೆ, ರಾತ್ರಿ 8.00 ರಿಂದ ಇಂಚರ ಮೆಲೊಡೀಸ್ ಅರ್ಪಿಸುವ “ಸಂಗೀತ ಗಾನ ಸಂಭ್ರಮ” ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.

vtv vitla
vtv vitla

ಫೆ. 6ನೇ ಆದಿತ್ಯವಾರ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ ಪೂಜೆ, ಗುಳಿಗ ಪ್ರತಿಷ್ಠೆ ಕಲಶಾಭಿಷೇಕ, ವಿಶೇಷ ದ್ರವ್ಯ ಕಲಶ ಸಹಿತ ಬ್ರಹ್ಮ ಕಲಶಾಭಿಷೇಕ, ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ ಸೇರಿದಂತೆ ಹಲವು ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಪೂರ್ವಾಹ್ನ 10.30 ರಿಂದ ಬೃಹತ್ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 2.00 ರಿಂದ ನವ ಕರ್ನಾಟಕ ಕೃಪಾಷ್ರಿತ ಯಕ್ಷಗಾನ ಮಂಡಳಿ ಬಾಯಾರು ಮತ್ತು ದಿ.ತಾಲ್ತಾಜೆ ಸುಬ್ರಾಯ ಭಟ್ ಪ್ರತಿಷ್ಠಾನ ಇವರಿಂದ “ಮೇಧಿನಿ ನಿರ್ಮಾಣ” ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 6ರಿಂದ ಝೀ ಕನ್ನಡ ಸರಿಗಮಪ ಖ್ಯಾತಿಯ ಜ್ಞಾನ ಗುರುರಾಜ್ ಪುತ್ತೂರು ಇವರಿಂದ “ಜ್ಞಾನ-ಗಾನಾಂಜಲಿ” ಹಾಗೂ ನೃತ್ಯ ಕಲಾವಿದೆ ಶ್ರೀಮತಿ ಕವಿತಾ ಸುಧಾಕರ್ ಮತ್ತು ತಂಡದಿಂದ “ಭರತ ನಾಟ್ಯಾಂಜಲಿ” ಕಾರ್ಯಕ್ರಮ ನಡೆಯಲಿದೆ.

ರಾತ್ರಿ 8.00 ರಿಂದ ರಾಷ್ಟ್ರದೇವೋಭವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾ ಶ್ರೀ ವಿದೂಷಿ ಶಾರದಾ ಮಣಿಶೇಖರ್ ಮತ್ತು ವಿದೂಷಿ ಶ್ರೀಲತಾ ನಾಗರಾಜ್ ಶಿಷ್ಯರಿಂದ “ಸನಾತನ ನೃತ್ಯಾಂಜಲಿ” ಕಾರ್ಯಕ್ರಮ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಫೆ.7ನೇ ಸೋಮವಾರ ಹಲವು ವೈದಿಕ ಕಾರ್ಯಕ್ರಮಗಳು, ಧಾರ್ಮಿಕ ಸಭಾ ಕಾರ್ಯಕ್ರಮ, ಹಾಗೂ ಮಧ್ಯಾಹ್ನ 2.00 ರಿಂದ ಶ್ರೀ ಚಾಮುಂಡೇಶ್ವರಿ ಯಕ್ಷಗಾನ ಕಲಾವೃಂದ ಕಣಿಯೂರು ಇವರಿಂದ ಯಕ್ಷಗಾನ ತಾಳ ಮದ್ದಳೆ ಹಾಗೂ ಶ್ರೀ ವಿನಾಯಕ ಯಕ್ಷಗಾನ ಕಲಾತಂಡ ಕರೆಕಾಡು ಮೂಲ್ಕಿ ಇವರಿಂದ “ಶಾಂಭವೀ ವಿಲಾಸ” ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!