Sunday, June 7, 2026
spot_imgspot_img
spot_imgspot_img

ಬಿ.ಸಿ. ರೋಡ್: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಎಸ್. ಟಿ. ಮೋರ್ಚಾ ಕಾರ್ಯಕಾರಿಣಿ ಸಭೆ

- Advertisement -
- Advertisement -

ಬಿ.ಸಿ.ರೋಡ್: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಎಸ್. ಟಿ. ಮೋರ್ಚಾ ಕಾರ್ಯಕಾರಿಣಿ ಸಭೆಯು ಬಿ.ಸಿ. ರೋಡ್ ಪಕ್ಷದ ಕಛೇರಿಯಲ್ಲಿ, ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ರಾಮ ನಾಯ್ಕ್ ಕುಕ್ಕಿನಾರು ಇವರ ಅಧ್ಯಕ್ಷತೆಯಲ್ಲಿ ಜರಗಿತ್ತು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವುದರ ಮೂಲಕ ಕಾರ್ಯಕಾರಿಣಿಗೆ ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಹಾಗೂ ಜಿಲ್ಲಾ ಎಸ್. ಟಿ. ಮೋರ್ಚಾ ಪ್ರಭಾರಿಯಾದ ಜಯಶ್ರೀ ಕರ್ಕೇರ, ಮಂಡಲ ಕಾರ್ಯದರ್ಶಿ ಹಾಗೂ ಎಸ್. ಟಿ. ಮೋರ್ಚಾ ಪ್ರಭಾರಿಯಾದ ರಮಾನಾಥ ರಾಯಿ, ಇವರು ಪಕ್ಷ ಸಂಘಟನಾತ್ಮಕವಾಗಿ ಮಾತನಾಡಿದರು.

ಮಂಡಲ ಉಪಾಧ್ಯಕ್ಷರಾದ ಜಯರಾಮ್ ನಾಯ್ಕ್ ಕುಂಟ್ರಕಲ, ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಯನ್. ಎರ್ಮೆನಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡಲ ಎಸ್.ಟಿ. ಮೋರ್ಚಾ ಉಪಾಧ್ಯಕ್ಷರುಗಳಾದ ಕೆ. ಟಿ. ನಾಯ್ಕ್ ಮಾಣಿ ಹಾಗೂ ಪುರಷೋತ್ತಮ ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ಯಶವಂತ ನಗ್ರಿ, ಸತೀಶ್ ನಾಯ್ಕ್ ಮಂಕುಡೆ, ಹಾಗೂ ಎಸ್. ಟಿ. ಸಮುದಾಯದ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

ಮಣಿನಾಲ್ಕೂರು ಪಂಚಾಯತ್ ಸದಸ್ಯರಾದ ಸರೋಜಿನಿ ಪ್ರಾರ್ಥನೆಗೈದರು. ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ್ ಮಂಕುಡೆ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷರಾದ ಪುರಷೋತ್ತಮ ನಾಯ್ಕ್ ನರಿಕೊಂಬು ವಂದಿಸಿದರು.

- Advertisement -

Related news

error: Content is protected !!