Friday, May 10, 2024
spot_imgspot_img
spot_imgspot_img

ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ಹೊಸದಿಲ್ಲಿ: 2021-22ನೇ ಸಾಲಿನ ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದೆ. ಈ ಬಾರಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.

ಕಲೆ, ಸಾಮಾಜಿಕ ಕೆಲಸ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಮತ್ತು ತಂತ್ರಜ್ಞಾನ, ವ್ಯಾಪಾರ ಮತ್ತು ಉದ್ಯಮ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಈ ವರ್ಷ ಒಟ್ಟು 128 ಮಂದಿಗೆ ಪ್ರಶಸ್ತಿ ನೀಡಲಾಗಿದೆ.

ಇದರಲ್ಲಿ ನಾಲ್ವರಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ ಮತ್ತು 107 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. 34 ಮಂದಿ ಮಹಿಳೆಯರು, 10 ಮಂದಿ ವಿದೇಶಿ/ಎನ್‌ಆರ್‌ಐಗಳು, 13 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.

BIGG BREAKING NEWS: 2022ನೇ ಸಾಲಿನ ಪದ್ಮ ವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿ ಪ್ರಕಟ: ಕರ್ನಾಟಕದ ಐವರಿಗೆ ಪದ್ಮಶ್ರೀ ಪುರಸ್ಕಾರ | Padma Awards

ಪದ್ಮವಿಭೂಷಣ
ನಾಲ್ವರಿಗೆ ಪದ್ಮವಿಭೂಷಣ ಘೋಷಿಸಲಾಗಿದ್ದು, ಇವರಲ್ಲಿ ಮೂವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಕಲೆ ವಿಭಾಗದಲ್ಲಿ ಮಹಾರಾಷ್ಟ್ರದ ಪ್ರಭಾ ಅತ್ರೆ, ಸಾಹಿತ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ಉತ್ತರ ಪ್ರದೇಶದ ರಾಧೇಶ್ಯಾಮ್‌ ಖೇಮ್ಕಾ, ನಾಗರಿಕ ಸೇವೆಯಲ್ಲಿ ಉತ್ತರಾಖಂಡದ ಜ| ಬಿಪಿನ್‌ ರಾವತ್‌, ಸಾರ್ವಜನಿಕ ವ್ಯವಹಾರದಲ್ಲಿ ಉತ್ತರ ಪ್ರದೇಶದ ಕಲ್ಯಾಣ್‌ ಸಿಂಗ್‌ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪದ್ಮಭೂಷಣ
ಒಟ್ಟು 17 ಮಂದಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಇವರಲ್ಲಿ ಪ್ರಮುಖವಾಗಿ ರಾಜಕೀಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌, ಪಶ್ಚಿಮ ಬಂಗಾಲದ ಎಡಪಕ್ಷಗಳ ನಾಯಕ ಬುದ್ಧದೇವ್‌ ಭಟ್ಟಾಚಾರ್ಯ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಹಾಗೆಯೇ, ಲಸಿಕೆ ತಯಾರಕರಾದ ಭಾರತ್‌ ಬಯೋಟೆಕ್‌ನ ಕೃಷ್ಣ ಎಲ್ಲ ಮತ್ತು ಸುಚಿತ್ರಾ ಎಲ್ಲ ಅವರಿಗೆ ಹಾಗೂ ಸೀರಂ ಸಂಸ್ಥೆಯ ಸಂಸ್ಥಾಪಕ ಸೈರಸ್‌ ಪೂನಾವಾಲ ಅವರಿಗೂ ಪ್ರಶಸ್ತಿ ಸಿಕ್ಕಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ, ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರಿಗೂ ಪದ್ಮಭೂಷಣ ಪ್ರಶಸ್ತಿಯ ಗೌರವ ಸಿಕ್ಕಿದೆ.

ರಾಜ್ಯದ ಐವರಿಗೆ ಗೌರವ
1.ಸುಬ್ಬಣ್ಣ ಅಯ್ಯಪ್ಪನ್‌: ವಿಜ್ಞಾನ ಮತ್ತು ತಂತ್ರಜ್ಞಾನ 2.ಎಚ್‌.ಆರ್‌. ಕೇಶವಮೂರ್ತಿ: ಕಲೆ 3.ಅಬ್ದುಲ್‌ ಖಾದರ್‌ ನಡಕಟ್ಟಿನ್‌: ಆವಿಷ್ಕಾರ 4.ಅಮೈ ಮಹಾಲಿಂಗ ನಾಯ್ಕ: ಕೃಷಿ 5.ಸಿದ್ದಲಿಂಗಯ್ಯ (ಮರಣೋತ್ತರ): ಸಾಹಿತ್ಯ

ಉತ್ತರ ಪ್ರದೇಶ 13
ಮಹಾರಾಷ್ಟ್ರ 09
ಪಶ್ಚಿಮ ಬಂಗಾಲ 06
ತಮಿಳುನಾಡು 06
ಗುಜರಾತ್‌ 06
ಕರ್ನಾಟಕ 05

- Advertisement -

Related news

error: Content is protected !!