Sunday, September 13, 2026
spot_imgspot_img
spot_imgspot_img

ಕಾರ್ಕಳ: ಗಾಂಜಾ ಸೇವಿಸುತ್ತಿದ್ದಾತನ ಬಂಧನ..!

- Advertisement -
- Advertisement -

ಕಾರ್ಕಳ: ಬಂಗ್ಲೆಗುಡ್ಡೆ ಪರನೀರು ಮೈದಾನ ಪರಿಸರದಲ್ಲಿ ಗಾಂಜಾ ಸೇವನೆಗೈದ ಆರೋಪಿಯೊಬ್ಬನನ್ನು ನಗರ ಠಾಣೆಯ ಅಪರಾಧ ವಿಭಾಗದ ಎಸ್.ಐ ದಾಮೋದರ ಕೆ.ಬಿ. ಬಂಧಿಸಿದ್ದಾರೆ.

ಮಹಮ್ಮದ್‌ರಫೀಕ್(36) ಬಂಧಿತ.

ಈತ ಗಾಂಜಾವನ್ನು ಪೇಪರ್‌ನಲ್ಲಿ ಸೇರಿಸಿ ಸಿಗರೇಟ್‌ನಂತೆ ರೋಲ್ ಮಾಡಿ ಸೇದುತ್ತಿದ್ದನು. ಆತನನ್ನು ವಿಚಾರಣೆ ಗುರಿಪಡಿಸಿದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಆರೋಪಿ ಗಾಂಜಾ ಸೇವನೆಗೈದಿರುವುದು ದೃಢಪಟ್ಟಿದೆ.

ಬಂಗ್ಲೆಗುಡ್ಡೆ ಪರಿಸರದಲ್ಲಿ ಅವ್ಯಾಹಕವಾಗಿ ಗಾಂಜಾ ಮಾರಾಟ ಹಾಗೂ ಸೇವನೆ ಜಾಲ ಸಕ್ರಿಯಾಗೊಂಡು ಹಲವು ಕ್ರಿಮಿನಲ್ ಚಟುವಟಿಕೆಗಳು ನಿರಂತರವಾಗಿದೆ ಎಂಬ ಆರೋಪಕ್ಕೆ ಈ ಪ್ರಕರಣ ಮತ್ತಷ್ಟು ಪುಷ್ಠಿ ನೀಡಿದೆ.

ಈ ಬಗ್ಗೆ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.

- Advertisement -

Related news

error: Content is protected !!