Friday, July 24, 2026
spot_imgspot_img
spot_imgspot_img

ಕಾಸರಗೋಡು: ಟ್ಯಾಂಕರ್‌ ಲಾರಿ-ಸ್ಕೂಟರ್‌ ನಡುವೆ ಅಪಘಾತ; ಸವಾರ ಸಾವು

- Advertisement -
- Advertisement -

ಕಾಸರಗೋಡು: ಟ್ಯಾಂಕರ್ ಲಾರಿ ಹಾಗೂ ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ವಿದ್ಯಾನಗರದಲ್ಲಿರುವ ಸರ್ಕಾರಿ ಕಾಲೇಜು ಬಳಿ ನಡೆದಿದೆ.

ಚಾಲಕ್ಕುಡಿಯ ಎ .ಪಿ ಬಿನೀಶ್ ( 45) ಮೃತಪಟ್ಟವರು. ಅವರ ಜೊತೆಗಿದ್ದ ತಮಿಳುನಾಡಿನ ಆನಂದ್ ಕುಮಾರ್ ಗಾಯಗೊಂಡಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆನಂದ್ ಕುಮಾರ್ ಚಲಾಯಿಸುತ್ತಿದ್ದ ಬೈಕ್ ಹಾಗೂ ಟ್ಯಾಂಕರ್ ನಡುವೆ ಅಪಘಾತ, ನಡೆದಿದ್ದು ರಸ್ತೆಗೆ ಎಸೆಯಲ್ಪಟ್ಟ ಬಿನೀಶ್ ಅವರನ್ನು ಕಾಸರಗೋಡು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!