Thursday, September 17, 2026
spot_imgspot_img
spot_imgspot_img

ಕಾಸರಗೋಡು: ಮನೆಯಂಗಳದಿಂದ ಅಡಿಕೆ ಕಳವು; ಓರ್ವ ಅರೆಸ್ಟ್

- Advertisement -
- Advertisement -

ಕಾಸರಗೋಡು: ಮನೆಯಂಗಳದಿಂದ ಅಡಿಕೆ ಕಳವುಗೈದ ಘಟನೆಗೆ ಸಂಬಂಧಪಟ್ಟಂತೆ ಬದಿಯಡ್ಕ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬದಿಯಡ್ಕ ಅಗಲ್ಪಾಡಿಯ ಪ್ರದೀಪ್ (30) ಎಂದು ಗುರುತಿಸಲಾಗಿದೆ.

ಅಗಲ್ಪಾಡಿಯ ವಸಂತ ಎಂಬವರ ಅಂಗಳದಲ್ಲಿ ಒಣಗಲು ಹಾಕಲಾಗಿದ್ದ ಅಡಿಕೆಯನ್ನು ಕಳವು ಗೈಯ್ಯಲಾಗಿದ್ದು, ಸಿಸಿಟಿವಿ ದೃಶ್ಯದಿಂದ ಆರೋಪಿಯ ಗುರುತು ಪತ್ತೆ ಹಚ್ಚಲಾಗಿತ್ತು.

ಬದಿಯಡ್ಕ ಪೊಲೀಸರಿಗೆ ನೀಡಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!