Tuesday, September 22, 2026
spot_imgspot_img
spot_imgspot_img

ಕಾಸರಗೋಡು: ಶವರ್ಮಾ ಸೇವಿಸಿ ಬಾಲಕಿ ಸಾವು; ಅನೇಕ ಮಂದಿ ಅಸ್ವಸ್ಥ..!

- Advertisement -
- Advertisement -

ಕಾಸರಗೋಡು: ಶವರ್ಮಾ ಸೇವಿಸಿ ಬಾಲಕಿ ಸಾವನ್ನಪ್ಪಿ 14 ಮಂದಿ ಅಸ್ವಸ್ಥಗೊಂಡು, 5 ಮಂದಿ ಗಂಭೀರ ಸ್ಥಿತಿಯಲ್ಲಿರುವ ಘಟನೆ ಚೆರ್ವತ್ತೂರಿನಲ್ಲಿ ನಡೆದಿದೆ.

vtv vitla
vtv vitla

ಕರಿವೆಲ್ಲೂರು ಪೇರಲದ 16 ವರ್ಷದ ಬಾಲಕಿ ಮೃತಪಟ್ಟಿದ್ದು, ಇತರ 14 ಮಂದಿ ಜ್ವರ, ವಾಂತಿ ಬೇಧಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಇವರನ್ನು ಜಿಲ್ಲಾಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಎಪ್ರಿಲ್ 29 ಮತ್ತು 30ರಂದು ಚೆರ್ವತ್ತೂರಿನ ಕೂಲ್ ಬಾರ್ ನಲ್ಲಿ ಇವರು ಶವರ್ಮ ಸೇವಿಸಿದ್ದರು. ಇದೀಗ ಘಟನೆ ಬಳಿಕ ಕೂಲ್ ಬಾರ್ ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

vtv vitla
vtv vitla
- Advertisement -

Related news

error: Content is protected !!