Sunday, September 13, 2026
spot_imgspot_img
spot_imgspot_img

ಕಾಸರಗೋಡು: 10 ಕೋಟಿ ರೂ. ಮೌಲ್ಯದ ತಿಮಿಂಗಳ ವಾಂತಿ ಸಹಿತ ಮೂವರು ವಶಕ್ಕೆ

- Advertisement -
- Advertisement -

ಕಾಸರಗೋಡು: ಸುಮಾರು 10 ಕೋಟಿ ರೂ. ಮೌಲ್ಯದ ತಿಮಿಂಗಳ ವಾಂತಿ (ಅಂಬರ್ ಗ್ರೀಸ್) ನ್ನು ವಶಪಡಿಸಿ ಕೊಂಡಿ ರುವ ಕಾಞಂಗಾಡ್ ಡಿ ವೈ ಎಸ್ಪಿ ಪಿ. ಬಾಲಕೃಷ್ಣನ್ ನೇತೃತ್ವದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಾಞಂಗಾಡ್ ಕೊವ್ವಲ್ ಪಳ್ಳಿಯ ನಿಶಾಂತ್ ಕೆ.ವಿ (41), ಕಾಞಂಗಾಡ್ ಮುರಿಯನಾವಿಯ ಸಿದ್ದೀಕ್ ಮಾಡಂಬಿಲ್ಲ ತ್ (31) ಕೊಟ್ಟೋಡಿಯ ದಿವಾಕರ (38) ಎಂದು ಗುರುತಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ ರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ದ್ದು, ಕಾಞಂಗಾಡ್ ಗ್ರೀನ್ ಲ್ಯಾಂಡ್ ಟೂರಿಸ್ಟ್ ಹೋಂನಿಂದ ತಿಮಿಂಗಿಲ ವಾಂತಿ ಸಹಿತ ಮೂವರನ್ನು ವಶಪಡಿಸಿ ಕೊಳ್ಳಲಾಗಿದೆ.

- Advertisement -

Related news

error: Content is protected !!