Monday, June 15, 2026
spot_imgspot_img
spot_imgspot_img

ಕುಂದಾಪುರ: ಮರದ ಗೆಲ್ಲು ಕಡಿಯುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

- Advertisement -
- Advertisement -

ಕುಂದಾಪುರ: ಲೈಟಿಂಗ್ ಹಾಕಲೆಂದು ಮರದ ಗೆಲ್ಲು ಕಡಿಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಮೃತಪಟ್ಟ ಘಟನೆ ಗುಜ್ಜಾಡಿ ಗ್ರಾಮದ ನಾಯಕ್ವಾಡಿ ಜಂಕ್ಷನ್‌ನಲ್ಲಿ ನಡೆದಿದೆ.

ಗುಜ್ಜಾಡಿ ಗ್ರಾಮದ ನಿವಾಸಿ ನರಸಿಂಹ ನಾಯಕ್ವಾಡಿ ಎಂಬುವರ ಮಗ ಸುಜಯ (20) ಮೃತ ಯುವಕ.

ನಿನ್ನೆ ಮಧ್ಯಾಹ್ನ ನಾಯ್ವಾಡಿ ಜಂಕ್ಷನ್ ಬಳಿ ಇರುವ ನಾಕ್ವಾಡಿಯ ಸಂಗಮೇಶ್ವರ ದೇವಸ್ಥಾನದ ದೀಪೋತ್ಸವ ಹಿನ್ನೆಲೆಯಲ್ಲಿ ಲೈಟಿಂಗ್ ಹಾಕಲು ಸುಜಯ ಮರದ ಗೆಲ್ಲು ಕಡಿಯುತ್ತಿದ್ದರು. ಈ ವೇಳೆ ಕೆಇಬಿಯ ಲೈನ್ ತಾಗಿ ವಿದ್ಯುತ್ ಆಘಾತದಿಂದ ಕೆಳಗೆ ಬಿದ್ದಿದ್ದಾರೆ.

ಬಳಿಕ ಅವರನ್ನು ಅಂಬುಲೆನ್ಸ್ ನಲ್ಲಿ ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತದೇಹವನ್ನು ಕುಂದಾಪುರ ಶವಾಗಾರದಲ್ಲಿ ಇಡಲಾಗಿದ್ದು, ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ.

- Advertisement -

Related news

error: Content is protected !!