Wednesday, June 24, 2026
spot_imgspot_img
spot_imgspot_img

ಕೋಟ: ಅಕ್ರಮ ಗೋ ಸಾಗಾಟ ಪತ್ತೆ; ಐದು ಗೋವುಗಳ ರಕ್ಷಣೆ; ಆರೋಪಿಗಳ ಪತ್ತೆಗಾಗಿ ಶೋಧ

- Advertisement -
- Advertisement -

ಕೋಟ: ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ವಾಹನವನ್ನು ಪೊಲೀಸರು ತಡೆದು ಐದು ಗೋವುಗಳನ್ನು ರಕ್ಷಿಸಿದ ಘಟನೆ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಸಾಸ್ತಾನದಲ್ಲಿ ನಡೆದಿದೆ.

ಸಾಬ್ರಕಟ್ಟೆ, ಕೋಟ-ಸಾಸ್ತಾನ ಮಾರ್ಗವಾಗಿ ಸಾಗುತ್ತಿದ್ದ ಮಹೇಂದ್ರ ಪಿಕ್‌ಅಪ್ ವಾಹನವನ್ನು ಪೊಲೀಸರು ಖಚಿತ ಮಾಹಿತಿ ಮೇರೆಗೆ ತಡೆದು ಪರಿಶೀಲಿಸುವಾಗ ಮೂವರು ಆರೋಪಿಗಳು ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದು ವಾಹನವನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಎರಡು ಕೋಣ, ಒಂದು ದನ, ಎರಡು ಗಂಡು ಕರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡು ಬಂದಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಕಾವಡಿಯ ನಿವಾಸಿ ಸತೀಶ್ ಪೂಜಾರಿ ಎನ್ನುವಾತ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ನಾಪತ್ತೆಯಾದ ಮೂವರಿಗೆ ಶೋಧ ನಡೆಸಿದ್ದಾರೆ.

ಕೋಟ ಠಾಣಾಧಿಕಾರಿ ಸಂತೋಷ್ ಬಿ.ಪಿ. ಹಾಗೂ ಸಿಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು

- Advertisement -

Related news

error: Content is protected !!