Friday, March 29, 2024
spot_imgspot_img
spot_imgspot_img

ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಇಬ್ಬರು ಮೃತ್ಯು- ಇನ್ನೂ ಆರು ಮಂದಿ ಒಳಗಡೆ ಸಿಲುಕಿರುವ ಶಂಕೆ!

- Advertisement -G L Acharya panikkar
- Advertisement -

ಮುಂಬೈ: ಮಾಲ್ ಒಂದರ ಮೂರನೇ ಮಹಡಿಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಮುಂಬೈನ ಭಾಂಡುಪ್ ನಲ್ಲಿ ಈ ಘಟನೆ ನಡೆದಿದ್ದು, ಆಸ್ಪತ್ರೆ ಒಳಗಡೆ ಇನ್ನೂ ಆರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಭಾಂಡುಪ್ ನ ಡ್ರೀಮ್ ಮಾಲ್ ಮೂರನೇ ಮಹಡಿಯಲ್ಲಿ ಕೋವಿಡ್ ಕೇರ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಅಗ್ನಿ ಶಾಮಕ ದಳ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಆರು ಮಂದಿ ಇನ್ನೂ ಒಳಗಡೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿರುವ ಮುಂಬೈ ಮೇಯರ್, ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಆದರೆ ಮಾಲ್ ನ ಒಳಗಡೆ ಆಸ್ಪತ್ರೆ ನಿರ್ಮಿಸಿರುವುದು ನಾನು ಇದೇ ಮೊದಲು ಕೇಳಿರುವುದು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ಈ ಘಟಕದಲ್ಲಿ 76 ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಲ್ಲಿ 73 ಮಂದಿ ಕೋವಿಡ್ ಸೋಂಕಿತರಾಗಿದ್ದರು. ಎಲ್ಲರನ್ನೂ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

- Advertisement -

Related news

error: Content is protected !!