Friday, March 29, 2024
spot_imgspot_img
spot_imgspot_img

ಗಂಡನಿಗೆ ಅಕ್ರಮ ಸಂಬಂಧ; ಪತ್ನಿ ಮಾಡಿದ್ದು ಮಾಸ್ಟರ್ ಪ್ಲ್ಯಾನ್!

- Advertisement -G L Acharya panikkar
- Advertisement -

ಕೋಲಾರ: ತನ್ನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಆರೋಪಿಸಿ, ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿ, ಆಕೆಯನ್ನು ಕಿಡ್ನಾಪ್‌ ಮಾಡಿರುವ ಘಟನೆ ಕೋಲಾರ ತಾಲೂಕು ಸೋಮಸಂದ್ರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ತಾಲೂಕಿನ ಸೊಮಸಂದ್ರ ಗ್ರಾಮದ ಕಮಲಮ್ಮ (33) ಗಂಡನನ್ನ ಕಳೆದುಕೊಂಡು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾಳೆ. ಈಕೆಯ ಪತಿ ವಿಜಯಕುಮಾರ್‌ ಮೃತಪಟ್ಟು ಹಲವು ವರ್ಷಗಳು ಆಗಿವೆ. ಆದರೆ ಈ ಕಮಲಮ್ಮ ತನ್ನ ಗಂಡನ ಸಹೋದರ ರಮೇಶ್‌ನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾಳೆ ಎಂಬುದು ರಮೇಶ್‌ ಪತ್ನಿ ಮೀನಾಳ ಆರೋಪ.

ಕಳೆದ ಮೂರು ವರ್ಷದಿಂದ ತನ್ನ ಗಂಡ ನಮ್ಮಿಂದ ದೂರವಿದ್ದಾನೆ. ಇದಕ್ಕೆ ಕಮಲಮ್ಮನೇ ಕಾರಣ ಎಂದು ರಮೇಶ್ ಪತ್ನಿ ಮೀನಾ ಆರೋಪಿಸಿದ್ದಾಳೆ. ಮೀನಾ ತನ್ನಿಬ್ಬರು ಮಕ್ಕಳು, ತಾಯಿ ರಾಮಕ್ಕ, ಜೊತೆಗೆ ಇನ್ನಿಬ್ಬರು ಅಪರಿಚಿತ ಮಹಿಳೆಯರು ಸೇರಿಕೊಂಡು ಕಮಲಮ್ಮನ ಮೇಲೆ ಮಂಗಳವಾರ ರಾತ್ರಿ ಹಲ್ಲೆ ನಡೆಸಿ ಆಕೆಯನ್ನು ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಬೆಂಗಳೂರಿನಿಂದ ಮಾರುತಿ ಸ್ವಿಫ್ಟ್‌ ಕಾರಲ್ಲಿ ಆಗಮಿಸಿ ಏಕಾಏಕಿ ಕಮಲಮ್ಮ ಮೇಲೆ ಹಲ್ಲೆ ಮಾಡಿ ಕಾರಲ್ಲಿ ಕಿಡ್ನಾಪ್‌ ಮಾಡಿಕೊಂಡು ಹೋಗಿದ್ದಾರೆ. ಮಹಿಳೆಯರು ಕಮಲಮ್ಮ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿವ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಈ ಸಂಬಂಧ ಮೀನಾ ಹಾಗು ಮಕ್ಕಳು ಹಾಗು ಮೀನಾ ತಾಯಿಯ ವಿರುದ್ಧ, ಮೀನಾ ಗಂಡ ರಮೇಶ್‌ ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ನಾನು ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿಲ್ಲದಿದ್ದರೂ, ವಿನಾಕಾರಣವಾಗಿ ಪತ್ನಿ ಮೀನಾ ಆರೋಪ ಮಾಡುತ್ತಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!