ಗಡಿ ಮೀರಿ ಅಬ್ಬರಿಸುತ್ತಿದೆ ಕಾಂತಾರಾ…! ಅನುಷ್ಕಾ, ಶಿಲ್ಪಾ ಶೆಟ್ಟಿ ಹೀಗಂದ್ರು..!

0
585

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಗಡಿಗೂ ಮೀರಿ ಅಬ್ಬರಿಸುತ್ತಿದೆ. ಭಾರಿ ಬೇಡಿಕೆಯ ಮೇರೆಗೆ ಕಾಂತಾರ ಪರಭಾಷೆಗಳಲ್ಲಿ ರಿಲೀಸ್ ಆಗಿದೆ. ಇದೀಗ ಕಾಂತಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಹಿಂದಿಯಲ್ಲಿ ಕಾಂತಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ವಿಶೇಷ.!

ಇದೀಗ ಕನ್ನಡ ಮೂಲದ ತೆಲುಗು ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಕಾಂತಾರ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಇದೀಗ ಬಾಲಿವುಡ್ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಸಿನಿಮಾ ನೋಡಿ ಹಾಡಿ ಹೊಗಳಿದ್ದಾರೆ.

ಕನ್ನಡತಿ ಬಾಹುಬಲಿ ಖ್ಯಾತಿಯ ಚೆಲುವೆ ಅನುಷ್ಕಾ ಶೆಟ್ಟಿಯವರು ಈ ಕುರಿತು ಟ್ವೀಟ್ ಮಾಡಿದ್ದಾರೆ. “ಈ ಸಿನೆಮಾ ಸಂಪೂರ್ಣವಾಗಿ ಇಷ್ಟವಾಯಿತು. ಇಡೀ ತಂಡಕ್ಕೆ ಅಭಿನಂದನೆಗಳು. ಈ ಅದ್ಭುತ ಅನುಭವಕ್ಕಾಗಿ ಧನ್ಯವಾದಗಳು” ಎಂದಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಶಿಲ್ಪಾ ಶೆಟ್ಟಿ ಎಂಥ ಅದ್ಭುತವಾದ ಸಿನಿಮಾ ಎಂದು ಹೇಳಿದ್ದಾರೆ. ಸಿನಿಮಾ ನೋಡಿ ರೋಮಾಂಚನವಾಯಿತು ಎಂದು ಚಿತ್ರದ ಬಗ್ಗೆ ವಿಮರ್ಶೆ ಮಾಡಿದ್ದಾರೆ. ‘ಕಾಂತಾರ ಚಿತ್ರಕ್ಕೆ ಮೆಚ್ಚುಗೆಯ ಪೋಸ್ಟ್. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದೆ. ಓ ಮೈ ಗಾಡ್ ಎಂಥ ಸಿನಿಮಾ. ಅದ್ಭುತವಾದ ನರೇಟಿವ್, ವೈಬ್ ಮತ್ತು ಪ್ರಪಂಚ. ಕ್ಲೈಮ್ಯಾಕ್ಸ್‌ ನೋಡಿ ಗೂಸ್‌ಬಂಪ್ಸ್ ಬಂತು. ನಾನು ಸೇರಿದಂತೆ ವೀಕ್ಷಕನನ್ನು ಆ ಜಗತ್ತಿಗೆ ಕರೆದುಕೊಂಡು ಹೋಗುತ್ತೆ. ನಿಜವಾಗಿಯೂ ನನ್ನನ್ನು ನನ್ನ ಊರಿಗೆ ಕರೆದೊಯ್ತು ಇದು ಸಿನಿಮಾ ಶಕ್ತಿ. ಯಾವುದೇ ಪಕ್ಷಪಾತವಿಲ್ಲದೆ, ಕಥೆ ಹೇಳುವಿಕೆ, ಅಭಿನಯ, ನಂಬಿಕೆ ಮತ್ತು ಅದ್ಭುತ ನಿರ್ದೇಶನ. ನೋಡಲೇ ಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನಿಮ್ಮ ಬಹುಮುಖ ಪ್ರತಿಭೆಗೆ ಹ್ಯಾಟ್ಸ್ ಆಫ್. ಸಕ್ಸಸ್ ಎಂಜಾಯ್ ಮಾಡಿ’ ಎಂದು ಹೇಳಿದ್ದಾರೆ.

astr