Thursday, April 25, 2024
spot_imgspot_img
spot_imgspot_img

ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್‌..! ಗೃಹ ಸಚಿವರಿಗೆ ದೂರು ನೀಡಿದ ಜಯ ಕರ್ನಾಟಕ ಜನಪರ ವೇದಿಕೆ- ಗೃಹ ಇಲಾಖೆಯಿಂದ ಸೂಕ್ತ ಭದ್ರತೆ ನೀಡುವಂತೆ ಒತ್ತಾಯ

- Advertisement -G L Acharya panikkar
- Advertisement -

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ, ಪರಿಸರವಾದಿ, ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕಾಧ್ಯಕ್ಷ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಲಾಗಿದೆ. ಅವರಿಗೆ ಜೀವ ಬೆದರಿಕೆಯಿದ್ದು ಸೂಕ್ತ ಭದ್ರತೆ ಒದಗಿಸುವಂತೆ ಜಯಕರ್ನಾಟಕ ಸಂಘಟನೆಯು ಗೃಹ ಸಚಿವರಿಗೆ ಮನವಿ ಮಾಡಿದೆ.

ಗುಣರಂಜನ್ ಶೆಟ್ಟಿ ಹಾಗೂ ಮನ್ಮಿ ತ್ ಶೆಟ್ಟಿ ಇಬ್ಬರೂ ದಿ. ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಮುತ್ತಪ್ಪ ರೈ ಅವರಿಂದ ಮನ್ಮಿತ್ ರೈ ದೂರ ಉಳಿದಿದ್ದರು ಎನ್ನಲಾಗಿದೆ. ಇದೀಗ ಮನ್ಮಿತ್ ರೈ ನಿಂದ ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಅವರಿಗೆ ಭದ್ರತೆ ನೀಡಬೇಕು ಎಂದು ಜಯಕರ್ನಾಟಕ ಸಂಘಟನೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಮನವಿ ಮಾಡಿದೆ.

ಆದರೆ ತನ್ನ ವಿರುದ್ಧದ ಆರೋಪ ನಿರಾಕರಿಸಿರುವ ಮನ್ಮಿತ್ ರೈ, ನಾನು ವಿದೇಶದಲ್ಲಿದ್ದೆನೆ. ನನ್ನ ಬಗ್ಗೆ ಯಾಕೆ ಆರೋಪ ಮಾಡುತ್ತಿದ್ದಾರೆ ಗೊತ್ತಿಲ್ಲ. ಯಾವುದು ಸತ್ಯ ಎಂಬುದನ್ನು ಪೊಲೀಸರೇ ತನಿಖೆ ನಡೆಸಲಿ. ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ಗಳೂ ಇಲ್ಲ. ನನಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಹೇಳಿದ್ದಾರೆ.

ಕನ್ನಡ ನಾಡಿನ ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಜಯಕರ್ನಾಟಕ ಜನಪರ ವೇದಿಕೆ..!

ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಶಿಕ್ಷಣ, ರೈತರ, ಮಹಿಳೆಯರ, ಕಾರ್ಮಿಕರ, ದೀನದಲಿತರ ಪರವಾಗಿ ಕಳೆದ ಕೆಲವು ದಶಕಗಳಿಂದ ಚಳುವಳಿಗಳನ್ನು ರೂಪಿಸಿದ ಅನುಭವಿಗಳ, ಬುದ್ದಿಜೀವಿಗಳ, ಪರಿಸರವಾದಿಗಳ, ಸಾಹಿತಿಗಳ ಲೇಖಕರ, ಎಲ್ಲಾ ವರ್ಗದ ಹೋರಾಟಗಾರರ, ಸ್ವಾಭಿಮಾನಿ ಕಾರ್ಯಕರ್ತರ ಜೊತೆಯಲ್ಲಿ ಪರಿಸರವಾದಿ, ಯುವ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿರವರ ಸಾರಥ್ಯದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಸಾವಿರಾರು ಕಾರ್ಯಕರ್ತರನ್ನು ಒಳಗೊಂಡಿದೆ ಜಯಕರ್ನಾಟಕ ಜನಪರ ವೇದಿಕೆ. ಹೊಸ ಹುರುಪು ಮತ್ತು ಹುಮ್ಮಸ್ಸಿನಿಂದ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ಆಲೋಚನೆಯೊಂದಿಗೆ ಪರಿಸರ ಸಂರಕ್ಷಣೆಯ ಮುಖ್ಯ ಉದ್ದೇಶದ ಜೊತೆಯಲ್ಲಿ ಸಂವಿಧಾನ ಮತ್ತು ಕಾನೂನು ಬದ್ಧವಾಗಿ ಕರ್ನಾಟಕದ ಸೇವಾ ಕೈಂಕರ್ಯದಲ್ಲಿ ಸಾಗುತ್ತಿದೆ.

ಅದರಲ್ಲೂ ಮುಖ್ಯವಾಗಿ ಪ್ರಸಿದ್ಧ ಹಲವಾರು ಸ್ವತಂತ್ರ ಸರೋವರ ಸಂರಕ್ಷಣಾವಾದಿಗಳು, ಪರಿಸರವಾದಿಗಳ ಮಾರ್ಗದರ್ಶನದಲ್ಲಿ ಹಾಗೂ ಅಂಗ ಸಂಸ್ಥೆಯಾದ ಐಕೇರ್ ಬ್ರಿಗೇಡ್ ಮತ್ತು ಐಲೀ‌ ಫೌಂಡೇಷನ್ ಅವರ ಸಹಯೋಗದೊಂದಿಗೆ, ಭೂಮಿಯ ಮೇಲಿನ ನೈಸರ್ಗಿಕ ಸಂಪತ್ತುಗಳಾದ ಜೀವ ಜಲ, ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವುದರ ಉದ್ದೇಶದಿಂದ, “ಮನೆಗೊಂದು ಮರ ಊರಿಗೊಂದು ಕೆರೆ” “ಜಯಕರ್ನಾಟಕ ಜನಪರ ವೇದಿಕೆಯ ನಡೆ ನಿರ್ಸಗದ ಕಡೆ” ಎಂಬ ಅಭಿಯಾನದಡಿಯಲ್ಲಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ಕೆರೆಗಳನ್ನು ಮನರ್ಜೀವನಗೊಳಿಸಿ ಪರಿಸರ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಸುವ ಹಾಗೂ ಪರಿಸರದ ಉಳಿವಿಗಾಗಿ ಸಾವಿರಾರು ಸಸಿಗಳನ್ನು ನೆಡುವ ಮುಖೇನ ಕಾಡು ಉಳಿಸಿ ನಾಡು ಬೆಳೆಸಿ’ ಎಂಬ ಜನಪ್ರಿಯವಾದ ಈ ಕಾರ್ಯದಲ್ಲಿ ಪರಿಸರವಾದಿಗಳು, ಹಿರಿಯ ನಾಗರೀಕರು, ಯುವಕರು, ಸಂಘ-ಸಂಸ್ಥೆಗಳು, ರಾಜಕೀಯ ನಾಯಕರೂ ಸಹ ಕೈಜೋಡಿಸಿರುವುದು ವಿಶೇಷ.

ಧೈರ್ಯ ತುಂಬಿದ ಗುಣರಂಜನ್ ಶೆಟ್ಟಿ..!

ಗುಣರಂಜನ್‌ ಶೆಟ್ಟಿಯವರ ಹತ್ಯೆಗೆ ಭೂಗತ ಪ್ರಪಂಚದ ಕೆಲ ವ್ಯಕ್ತಿಗಳ ತಂಡವೊಂದು ಸಂಚು ರೂಪಿಸಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಬರುತ್ತಿರುವ ಸುದ್ದಿ ತಿಳಿದ ಕಾರ್ಯಕರ್ತರಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ಇದರ ವಿಚಾರವಾಗಿ ಕೆಲಸದ ನಿಮಿತ್ತ ಹೊರಗಡೆಯಿದ್ದ ಗುಣರಂಜನ್ ಶೆಟ್ಟಿಯವರಿಗೆ ಕರೆ ಮಾಡಿ ಮಾತನಾಡಿದಾಗ “ಈ ಪ್ರಕರಣವನ್ನು ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ, ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಗಳಿಂದ ಪ್ರಕರಣದ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಯಾರು ಆತಂಕ ಪಡುವ ಅವಶ್ಯಕತೆಯಿಲ್ಲ” ಎಂದು ಧೈರ್ಯ ತುಂಬಿದರು.

ಈ ವಿಚಾರವಾಗಿ ಸಂಘಟನೆಯ ಪ್ರಮುಖರು ಗೃಹ ಸಚಿವರು ಮತ್ತು ಗೃಹ ಇಲಾಖೆಯ ಅಧಿಕಾರಿಗಳನ್ನು ಭೇಟಿಮಾಡಿ ಈ ತನಿಖೆಯನ್ನು ಉನ್ನತ ಮಟ್ಟದಲ್ಲಿ ನಡೆಸಿ, ಯುವ ಸಂಸ್ಥಾಪಕರಿಗೆ ಗೃಹ ಇಲಾಖೆಯಿಂದ ಸೂಕ್ತ ಭದ್ರತೆ ಮತ್ತು ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಆದುದರಿಂದ ಅಲ್ಲಿಯವರೆಗೂ ಕಾರ್ಯಕರ್ತ ಬಂಧುಗಳು ಸಮಾಧಾನದಲ್ಲಿರುವಂತೆ ಹಾಗೂ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿ. ಗುಣರಂಜನ್‌ ಶೆಟ್ಟಿಯವರ ಹತ್ಯೆಗೆ ಸಂಚು ರೂಪಿಸಿರುವ ಭೂಗತ ಪಾತಕಿಗಳನ್ನು ಹಾಗೂ ಇವರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಈ ಕೃತ್ಯವೆಸಗಲು ಸಹಕರಿಸಿರುವವರನ್ನು ಈ ಕೂಡಲೇ ಬಂಧಿಸಿ, ಸೂಕ್ತ ಕಠಿಣ ಕ್ರಮವನ್ನು ಕೈಗೊಂಡು, ಯಾವುದೇ ಆಹಿತಕರ ಘಟನೆ ನಡೆಯುವ ಮುನ್ನ ಮುನ್ನೆಚ್ಚರಿಕೆಯ ಕ್ರಮವಾಗಿ ಗುಣರಂಜನ್ ಶೆಟ್ಟಿಯವರ ರಕ್ಷಣೆಗಾಗಿ ಗೃಹ ಇಲಾಖೆಯಿಂದ ಸೂಕ್ತ ಭದ್ರತೆಯನ್ನು ನೀಡಬೇಕೆಂದು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ, ಜಿಲ್ಲಾ, ತಾಲ್ಲೂಕು, ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷರು, ಮಹಿಳಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಾವಿರಾರು ಕಾರ್ಯಕರ್ತರ ಪರವಾಗಿ ಮನವಿಯನ್ನು ಸಲ್ಲಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!