Monday, May 6, 2024
spot_imgspot_img
spot_imgspot_img

ಗ್ರಾಮ ಲೆಕ್ಕಾಧಿಕಾರಿ ಫುಲ್​ ಟೈಟ್​ ; ತಹಶೀಲ್ದಾರ್​ ಕಚೇರಿ ಎದುರೇ ಸವಿ ನಿದ್ದೆ.!!

- Advertisement -G L Acharya panikkar
- Advertisement -

ಕರ್ತವ್ಯವೇಳೆ ಕಂಠಪೂರ್ತಿ ಕುಡಿದು ತಾಲೂಕು ತಹಶಿಲ್ದಾರ ಕಚೇರಿಯ ಮುಂದೆ ಗ್ರಾಮಲೆಕ್ಕಾಧಿಕಾರಿ ಅಡ್ಡಲಾಗಿ ಮಲಗಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಹಶೀಲ್ದಾರ್ ಕಚೇರಿ ಎದುರು ನಡೆದಿದೆ.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು ಗ್ರಾಮಲೆಕ್ಕಾಧಿಕಾರಿ ತಹಶೀಲ್ದಾರ್ ಕಚೇರಿ ಮುಂದೆ ಮಲಗಿರುವ ಪ್ರಕರಣ ನಡೆದಿದೆ. ಸಂಜು ಬೆಣ್ಣಿ ಎಂಬ ಗ್ರಾಮ ಲೆಕ್ಕಾಧಿಕಾರಿ ಮದ್ಯಪಾನ ಮಾಡಿ ಸವದತ್ತಿ ತಹಶೀಲ್ದಾರ್ ಕಚೇರಿ ಎದುರು ಮಲಗಿದವರು.

ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು, ಈ ರೀತಿಯ ಬೇಜವಾಬ್ದಾರಿ ತೋರಿದ ಅಧಿಕಾರ ವಿರುದ್ಧ ಜನ ಆಕ್ರೋಶ ಹೊರ ವ್ಯಕ್ತಪಡಿಸಿದ್ದಾರೆ. ಕುಡಿದು ಮಲಗಿರುವ ಗ್ರಾಮ ಲೆಕ್ಕಾಧಿಕಾರಿಯ ಫೋಟೋ ಎಲ್ಲೆಂದರಲ್ಲಿ ವೈರಲ್ ಆಗಿದ್ದು, ಈ ಅಧಿಕಾರಿ ಮೇಲೆ ಮೇಲಾಧಿಕಾರಿಗಳು ಯಾವ ರೀತಿಯ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

- Advertisement -

Related news

error: Content is protected !!