Friday, June 19, 2026
spot_imgspot_img
spot_imgspot_img

ಘಾನಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೋರ್ವನಿಗೆ ಕೊರೋನಾ ಪಾಸಿಟಿವ್; ಒಮಿಕ್ರಾನ್ ಶಂಕೆ

- Advertisement -
- Advertisement -
vtv vitla
vtv vitla

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಘಾನಾದಿಂದ ಬಂದಿಳಿದ ಪ್ರಯಾಣಿಕರೊಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ, ಹಾಗಾಗಿ ಒಮಿಕ್ರಾನ್ ಕರಾವಳಿ ಕರ್ನಾಟಕಕ್ಕೆ ತಲುಪಿರುವ ಆತಂಕ ಇದೀಗ ಎದುರಾಗಿದೆ.

ಒಮಿಕ್ರಾನ್‌ ನ “ಹೈ ರಿಸ್ಕ್” ದೇಶವೆಂದು ಕರೆಯಲ್ಪಟ್ಟ ಘಾನಾ, ಇಲ್ಲಿಂದ ಆಗಮಿಸಿದ ನಂತರ ವಿಮಾನ ನಿಲ್ದಾಣದಲ್ಲಿ ಕ್ಷಿಪ್ರ RTPCR ಮಾದರಿಯಲ್ಲಿ ಪರೀಕ್ಷಿಸಲಾಯಿತು. ಆಗ ಪಾಸಿಟಿವ್ ಎಂದು ಕಂಡುಬಂದಿದೆ.

ಪರೀಕ್ಷೆಯ ಆದ ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು, ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿ, ಜಿಲ್ಲಾ ಕಣ್ಗಾವಲು ಅಧಿಕಾರಿ (ಡಿಎಸ್ಒ), ಕೋವಿಡ್ ನೋಡಲ್ ಅಧಿಕಾರಿ ಮತ್ತು ಇತರ ಉಸ್ತುವಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. ನಿಯಂತ್ರಣ ಕ್ರಮಗಳ ಕುರಿತು ಚರ್ಚೆ ಮಾಡಿದರು.

ವ್ಯಕ್ತಿಯನ್ನು ನಿನ್ನೆ ರಾತ್ರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಲಕ್ಷಣರಹಿತರಾಗಿದ್ದಾರೆ ಎಂದು ಡಿಸಿ ಇಂದು ಪರಿಶೀಲನಾ ಸಭೆಯ ನಂತರ ತಿಳಿಸಿದ್ದಾರೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!