Saturday, August 29, 2026
spot_imgspot_img
spot_imgspot_img

ಚಡ್ಡಿ ಸುಡುವ ಮೂಲಕ ಆರ್ ಎಸ್ ಎಸ್ ವಿರುದ್ಧ ಕಾಂಗ್ರೆಸ್ ನಿಂದ ಪ್ರತಿಭಟನೆ; ಸಿದ್ದರಾಮಯ್ಯಗೆ ಹಳೆ ಚಡ್ಡಿ ಪಾರ್ಸೆಲ್ ಕಳುಹಿಸಿದ ಹಿಂ.ಜಾ.ವೇ ಕಾರ್ಯಕರ್ತರು

- Advertisement -
- Advertisement -

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ‘ಆರ್‌ಎಸ್‌ಎಸ್‌ನ ಚಡ್ಡಿ ಸುಡುವ ಅಭಿಯಾನ ಮಾಡಬೇಕಾಗುತ್ತೆ’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆಆ‌ಸ್ಎಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದರ ಮುಂದುವರಿದ ಭಾಗವಾಗಿ ಆರ್ಎಸ್ಎಸ್ ಕಾರ್ಯಕರ್ತರು ಸಿದ್ದರಾಮಯ್ಯಗೆ ಚಡ್ಡಿಪಾರ್ಸಲ್ ಮಾಡಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ಆರ್‌ಎಸ್ಎಸ್ ಕಾರ್ಯಕರ್ತರು ಚಡ್ಡಿ ಪಾರ್ಸಲ್ ಮಾಡಿದ್ದಾರೆ. ನೀವು ಜೀವನ ಪೂರ್ತಿ ಕಳೆದರೂ ನಮ್ಮ ಚಡ್ಡಿ ಸುಟ್ಟು ಹಾಕಲು ಸಾಧ್ಯವಿಲ್ಲ. ಕೋಟ್ಯಾಂತರ ದೇಶಭಕ್ತರು ಆರ್‌ಎಸ್‌ಎಸ್‌ ನಲ್ಲಿದ್ದಾರೆ. ಆರ್‌ಎಸ್ಎಸ್ ಬಗ್ಗೆ ತಿಳಿಯದೆ ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ.

ಆರ್‌ಎಸ್ಎಸ್ ಕ್ಯಾಂಪ್‌ನಲ್ಲಿ ಸಿದ್ದರಾಮಯ್ಯ ಭಾಗವಹಿಸಲಿ, ಸಂಘದ ಸಿದ್ಧಾಂತ, ದೇಶ ಭಕ್ತಿ ತಿಳಿಯುತ್ತದೆ. ಎಲ್ಲಾ ಕಡೆ ಚಡ್ಡಿ ಸುಡುತ್ತೇವೆಂದು ಕೈ ನಾಯಕರು ಹೇಳಿದ್ದಾರೆ. ಅವರಿಗೆ ತೊಂದರೆ ಆಗಬಾರದು, ಅವರು ಇಲ್ಲಿಯವರೆಗೆ ಬರಬಾರದು. ಹಾಗಾಗಿ ನಾವೇ ಚಡ್ಡಿ ಪಾರ್ಸಲ್ ಮಾಡಿದ್ದೇವೆ. ಕಾಂಗ್ರೆಸ್ ಕೇಂದ್ರ ಕಚೇರಿಗೆ ಕಳುಹಿಸಿ ಕೊಡ್ತೀವಿ ಅಲ್ಲೇ ಸುಡಲಿ, ಇಲ್ಲಿಗೆ ಬರುವುದು ಬೇಡ ಎಂದಿರುವ ಕಾರ್ಯಕರ್ತರು ಮನೆ ಮನೆಗೆ ತೆರಳಿ ಹಳೇ ಚಡ್ಡಿ ಸಂಗ್ರಹ ಮಾಡಿದ್ದಾರೆ.

ಅದರಂತೆ ನೂರಾರು ಚಡ್ಡಿ ಸಂಗ್ರಹ ಮಾಡಿರುವ ಆರ್‌ಸ್ ಎಸ್ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ರವಾನೆ ಮಾಡಿದ್ದಾರೆ. ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಚಡ್ಡಿ ಕಳುಹಿಸಿದ್ದಾರೆ.

- Advertisement -

Related news

error: Content is protected !!