Tuesday, May 7, 2024
spot_imgspot_img
spot_imgspot_img

ಚಳಿಗಾಲದಲ್ಲಿ ತಲೆ ಕೂದಲ ಕಾಳಜಿ ಹೇಗೆ? ಗೊಂದಲ ಬೇಡ ಸರಳ ವಿಧಾನ ಇಲ್ಲಿದೆ ನೋಡಿ

- Advertisement -G L Acharya panikkar
- Advertisement -
suvarna gold

ತಲೆ ಕೂದಲು ರೇಷ್ಮೆಯಂತೆ ಹೊಳೆಯಬೇಕಾದರೆ ಹಲವು ಮಾರ್ಗಗಳನ್ನು ಅನುಸರಿಸಬೇಕು ಎಂಬುವುದು ನಿಜ. ಆದಾಗ್ಯೂ, ಕೆಲವರು ವರ್ಷವಿಡೀ ಒಣ ನೆತ್ತಿಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ಇದು ಹೆಚ್ಚಾಗಿ ಚಳಿಗಾಲ ಮತ್ತು ಬೇಸಿಗೆಯಲ್ಲಿ ಬರುವ ಋತುಮಾನದ ಸಮಸ್ಯೆಯಾಗಿದೆ. ಈ ಸಮಯದಲ್ಲಿ ತಲೆಹೊಟ್ಟು, ತಲೆಯಲ್ಲಿ ತುರಿಕೆ ಮತ್ತು ತಲೆಯಲ್ಲಿ ನೋವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದಲ್ಲದೇ ಕೂದಲಿಗೆ ಸಂಬಂಧಿಸಿದ ಸಮಸ್ಯೆಯೂ ಹೆಚ್ಚುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಕೂದಲು (Hair) ಮತ್ತು ನೆತ್ತಿಯನ್ನು ಪೋಷಿಸುವ ಅನೇಕ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಚಳಿಗಾಲದಲ್ಲಿ ತಲೆ ಕೂದಲಿನ ಕಾಳಜಿಗೆ ಈ ಸಲಹೆಗಳನ್ನು ಅನುಸರಿಸಿ.

vtv vitla
vtv vitla

ತೆಂಗಿನ ಎಣ್ಣೆ, ಮೊಸರು
2-3 ಟೇಬಲ್ಸ್ಪೂನ್ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ತಾಜಾ ಮೊಸರು ಮಿಶ್ರಣ ಮಾಡಿ. ಎರಡನ್ನೂ ಸೇರಿಸಿ ಹೇರ್ ಮಾಸ್ಕ್ ತಯಾರಿಸಿ. ಇದನ್ನು ತಲೆ ಕೂದಲು ಮತ್ತು ನೆತ್ತಿಯ ಮೇಲೆ ಅನ್ವಯಿಸಿ. ನಂತರ ಬೆರಳುಗಳಿಂದ ಲಘುವಾಗಿ ಮಸಾಜ್ ಮಾಡಿ. ಒಂದು ಗಂಟೆ ಬಳಿಕ ತಲೆ ಸ್ನಾನ ಮಾಡಿ. ಚಳಿಗಾಲದಲ್ಲಿ ನೆತ್ತಿ ಒಣಗದಂತೆ ನೋಡಿಕೊಳ್ಳಲು ನೀವು ವಾರಕ್ಕೆ 1 ರಿಂದ 2 ಬಾರಿ ಈ ಹೇರ್ ಮಾಸ್ಕ್ ಅನ್ನು ಬಳಸಬಹುದು.

ಬಾಳೆಹಣ್ಣು, ಆಲಿವ್ ಎಣ್ಣೆ
ಬಾಳೆಹಣ್ಣು ರುಬ್ಬಿ ಇದಕ್ಕೆ 2-3 ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಪೇಸ್ಟ್​ ರೀತಿಯಲ್ಲಿ ಇದನ್ನು ಮಾಡಿ ತಲೆ ಕೂದಲು ಮತ್ತು ನೆತ್ತಿಯ ಮೇಲೆ ಅನ್ವಯಿಸಿ. ನಂತರ ಕೂದಲನ್ನು ಸಡಿಲವಾದ ಬನ್‌ನಲ್ಲಿ ಕಟ್ಟಿಕೊಳ್ಳಿ ಮತ್ತು ಶವರ್ ಕ್ಯಾಪ್ ಧರಿಸಿ. 30 -40 ನಿಮಿಷದ ಬಳಿಕ ಶಾಂಪೂ ಬಳಸಿ ತಲೆ ಸ್ನಾನ ಮಾಡಿ. ಚಳಿಗಾಲದಲ್ಲಿ ಒಂದು ಅಥವಾ ಎರಡು ಬಾರಿ ಹೀಗೆ ಮಾಡಿ.

vtv vitla

ಅಲೋವೆರಾ, ಜೇನುತುಪ್ಪ
ಚಳಿಗಾಲದಲ್ಲಿ ತಲೆಯ ನೆತ್ತಿ ಭಾಗ ಚೆನ್ನಾಗಿರಲು ಒಂದು ಬಟ್ಟಲಿನಲ್ಲಿ 2-3 ಚಮಚ ಅಲೋವೆರಾ ಜೆಲ್ ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಈ ಮಿಶ್ರಣವನ್ನು ತಲೆಯ ನೆತ್ತಿ ಮತ್ತು ಕೂದಲಿಗೆ ಅನ್ವಯಿಸಿ. ಬಳಿಕ ಮಸಾಜ್ ಮಾಡಿ. 30-40 ನಿಮಿಷಗಳ ಕಾಲ ಬಿಡಿ. ನಂತರ ಸ್ನಾನ ಮಾಡಿ.

ಕ್ಯಾಸ್ಟರ್ ಆಯಿಲ್ ಬಳಕೆ
ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಕ್ಯಾಸ್ಟರ್ ಆಯಿಲ್ ತೆಗೆದುಕೊಳ್ಳಿ. ಈ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ. ಎರಡು ಗಂಟೆಗಳ ಕಾಲ ಬಿಟ್ಟು ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ನೀವು ವಾರದಲ್ಲಿ ಎರಡು ಅಥವಾ ಮೂರು ಬಾರಿ ಬಳಸಬಹುದು. ಚಳಿಗಾಲದಲ್ಲಿ ನೆತ್ತಿಯ ಶುಷ್ಕತೆಯನ್ನು ತಡೆಯಲು ಸುಲಭವಾದ ಮಾರ್ಗವೆಂದರೆ ಕ್ಯಾಸ್ಟರ್ ಆಯಿಲ್.

- Advertisement -

Related news

error: Content is protected !!