Saturday, August 29, 2026
spot_imgspot_img
spot_imgspot_img

ಚಿಕ್ಕಮಗಳೂರು: ಮಗನ ಪಬ್ ಜಿ ಆಟದ ಹುಚ್ಚಿಗೆ ಬಲಿಯಾದ ತಾಯಿ

- Advertisement -
- Advertisement -

ಚಿಕ್ಕಮಗಳೂರು: ಪುತ್ರನ ಪಬ್ ಜಿ ಗೇಮ್ ಹುಚ್ಚಿಗೆ ತಾಯಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್ ನಲ್ಲಿ ಘಟನೆ ನಡೆದಿದ್ದು, ಮೈಮುನಾ (40) ಮೃತ ದುರ್ದೈವಿ. ಪಬ್ ಜಿ ಗೇಮ್ ಆಡದಂತೆ ಮಗನ ಜೊತೆ ತಂದೆ ಜಗಳ ನಡೆಸಿದ್ದು, ಆಟ ವಿರೋಧಿಸಿದ ಅಪ್ಪನ ಜೊತೆ ಮಗ ಜಗಳಕ್ಕಿಳಿದಿದ್ದ ಎನ್ನಲಾಗಿದೆ.

ಈ ವೇಳೆ ಸಾಯಿಸುತ್ತೇನೆಂದು ಮಗನಿಗೆ ತಂದೆ ಇಮ್ಮಿಯಾಜ್ ಬಂದೂಕು ಹಿಡಿದಾಗ, ಮಗನಿಗೆ ಗುಂಡು ಹಾರಿಸುತ್ತಾರೆಂದು ತಾಯಿ ಮೈಮುನಾ ಅಡ್ಡ ಬಂದಿದ್ದಾರೆ. ಆಗ ಮದ್ಯದ ಮತ್ತಿನಲ್ಲಿದ್ದ ಪತಿ ಇಮ್ಮಿಯಾಜ್ ಪತ್ನಿಗೆ ಗುಂಡು ಹಾರಿಸಿದ್ದಾರೆ. ಪರಿಣಾಮ ಮೈಮುನಾ ಸಾವನ್ನಪ್ಪಿದ್ದಾರೆ.

ಇಮ್ಮಿಯಾಜ್ ಹಾಗೂ 17 ವರ್ಷದ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -

Related news

error: Content is protected !!