Wednesday, May 8, 2024
spot_imgspot_img
spot_imgspot_img

ತವಾಂಗ್ ಮುಖಾಮುಖಿ ಬಳಿಕ ಭಾರತ-ಪಾಕ್ ಗಡಿಯಲ್ಲಿ ಗಸ್ತು ಹೆಚ್ಚಿಸಿದ ಭದ್ರತಾ ಪಡೆ

- Advertisement -G L Acharya panikkar
- Advertisement -

ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಮುಖಾಮುಖಿಯಾದ ಬಳಿಕ ಸಾಂಬಾದಲ್ಲಿ ಭಾರತ-ಪಾಕ್ ಇಸ್ತಾನ್ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆಗಳು ಗಸ್ತು ಹೆಚ್ಚಿಸಿವೆ. ಸಾಂಬಾದಲ್ಲಿ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಗಡಿ ಭದ್ರತಾ ಪಡೆ(BSF) ತೀವ್ರ ನಿಗಾ ಇರಿಸಿದೆ. ಯಾವುದೇ ಹವಾಮಾನ ಮತ್ತು ಸಮಯದಲ್ಲಿ ಗಡಿಯಾಚೆ ಬರುವ ಶತ್ರುಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ LAC ಉದ್ದಕ್ಕೂ ಇರುವ ಪ್ರದೇಶವು ಸೂಕ್ಷ್ಮ ವಲಯವಾಗಿದ್ದು, 2006ರಿಂದ ಭಾರತ ಮತ್ತು ಚೀನಾ ಸೇನೆ ಗಸ್ತು ತಿರುಗುತ್ತಿದೆ. ಆದರೆ 2022ರ ಡಿಸೆಂಬರ್ 9 ರಂದು ಚೀನೀ ಸೈನಿಕರು ತವಾಂಗ್ ಸೆಕ್ಟರ್‌ನಲ್ಲಿ LAC ಬಳಿ ಪ್ರವೇಶಿಸಿದ್ದರು.

ಇದರಿಂದ ಕೋಪಗೊಂಡ ಭಾರತೀಯ ಸೈನಿಕರು ಮುನ್ನುಗ್ಗಿದ್ದರು, ಈ ವೇಳೆ ಎರಡೂ ದೇಶಗಳ ಸೈನಿಕರ ನಡುವೆ ಘರ್ಷಣೆ ಉಂಟಾಗಿದೆ. ಭಾರತೀಯ ಸೈನಿಕರು ಚೀನಾ ಸೈನಿಕರ ವಿರುದ್ಧ ತೀವ್ರವಾಗಿ ಹೋರಾಟ ನಡೆಸಿದ್ದರು. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ತವಾಂಗ್‌ನ ಮುಖಾಮುಖಿ ಪ್ರದೇಶದಲ್ಲಿ ಭಾರತೀಯ ಸೈನಿಕರು ಚೀನಾ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಗಾಯಗೊಂಡಿರುವ ಚೀನಾ ಸೈನಿಕರ ಸಂಖ್ಯೆ ಭಾರತೀಯ ಸೈನಿಕರಿಗಿಂತ ಹೆಚ್ಚಿದೆ.

ಜೂನ್ 15, 2020ರ ಘಟನೆಯ ನಂತರ ಮೊದಲ ಬಾರಿಗೆ ನಡೆದ ಘರ್ಷಣೆ ಇದಾಗಿದೆ. 2020 ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದರು.

ಭಾರತದ ಕಡೆಯಿಂದ ಚೀನಾ ಸೈನಿಕರು ಇಷ್ಟೊಂದು ಪ್ರಬಲ ವಿರೋಧ ಏರ್ಪಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಈ ಹೋರಾಟದಲ್ಲಿ ಭಾರತೀಯ ಚೀನೀ ಸೈನಿಕರನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದಾತೆ. ಈ ಚಕಮಕಿಯಲ್ಲಿ ಚೀನಾ ಸೈನಿಕರು ಭಾರೀ ನಷ್ಟ ಅನುಭವಿಸಿದ್ದಾರೆ.

ಭಾರತ-ಚೀನಾ ಗಡಿಯಲ್ಲಿನ ಪ್ರಕ್ರಿಯೆಯು ಸಂಪೂರ್ಣವಾಗಿ ಸ್ಪಷ್ಟವಾಗಿದೆ. ಎರಡೂ ದೇಶಗಳ ಸೈನಿಕರು ಮುಖಾಮುಖಿಯಾದರೂ ಸಹ ಅವರು ಶಸ್ತ್ರಾಸ್ತ್ರಗಳನ್ನು ಬಳಸುವಂತಿಲ್ಲ ಜೊತೆಗೆ ಜಗಳವಾಡುವಂತಿಲ್ಲ. ಆದರೆ ಒಂದು ವೇಳೆ ನಿಯಮ ಮೀರಿ ಜಗಳ ನಡೆದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಹಲವು ರೀತಿಯಲ್ಲಿ ಎದುರಾಗುವುದು ಖಂಡಿತ. ಹೀಗಾಗಿ ಭದ್ರತಾ ಪಡೆಗಳು ಯಾವುದೇ ಸಂದರ್ಭದಲ್ಲೂ ನಾವು ಯುದ್ಧಕ್ಕೆ ಸಿದ್ಧರಿದ್ದೇವೆ ಎಂದು ಹೇಳಿದೆ.

- Advertisement -

Related news

error: Content is protected !!