Sunday, May 19, 2024
spot_imgspot_img
spot_imgspot_img

ತೊಕ್ಕೊಟ್ಟು: ಮದುವೆ ಕಾರ್ಯಕ್ರಮದಲ್ಲಿ ಯುವತಿಗೆ ಚುಡಾಯಿಸಿದ ಪ್ರಕರಣ; ಎರಡು ತಂಡಗಳ ನಡುವೆ ಘರ್ಷಣೆ: ಮೂವರ ಬಂಧನ..!

- Advertisement -G L Acharya panikkar
- Advertisement -

ಉಳ್ಳಾಲ: ತೊಕ್ಕೊಟ್ಟಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಯುವಕನೋರ್ವ ಯುವತಿಗೆ ಚುಡಾಯಿಸಿದ ಪ್ರಕರಣ ನಡೆದಿದ್ದು, ಆ ಬಳಿಕ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿರುವ ಘಟನೆ ನಡೆದಿದೆ.

ತೊಕ್ಕೊಟ್ಟು ಒಳಪೇಟೆಯ ಸಭಾಂಗಣವೊಂದರಲ್ಲಿ ಮದುವೆ ಸಮಾರಂಭ ನಡೆದಿದ್ದು, ಈ ವೇಳೆ ಯುವಕನೊಬ್ಬ ಯುವತಿಗೆ ಚುಡಾಯಿಸಿದ್ದ ಎನ್ನುವ ಆರೋಪ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಯುವಕರ ನಡುವೆ ಘರ್ಷಣೆಯುಂಟಾಗಿದೆ ಎನ್ನಲಾಗಿದೆ.

ಈ ವೇಳೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಇದನ್ನು ಗಮನಿಸಿದ ಪೊಲೀಸರು ಯುವಕರನ್ನು ವಿಚಾರಿಸಿದ್ದು, ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!