Wednesday, July 22, 2026
spot_imgspot_img
spot_imgspot_img

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನೆನಪಿರಲಿ’ ಪ್ರೇಮ್​ ಜತೆ ನಟಿಸಿದ್ದ ಹೀರೋಯಿನ್

- Advertisement -
- Advertisement -

ಕನ್ನಡ ಸಿನಿಮಾ ಹಾಗೂ ಹಿಂದಿ ಕಿರುತೆರೆಯಲ್ಲಿ ನಟಿಸಿದ್ದ ಕರೀಷ್ಮಾ ತನ್ನಾ ಅವರು ಪ್ರಿಯಕರ ವರುಣ್​ ಬಂಗೇರಾ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರು ಹಾಗೂ ಕುಟುಂಬ ವರ್ಗದವರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ. ಸದ್ಯ, ಮದುವೆ ಫೋಟೋಗಳು ಹಾಗೂ ವಿಡಿಯೋಗಳು ಸಾಕಷ್ಟು ವೈರಲ್​ ಆಗುತ್ತಿವೆ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

2001ರಲ್ಲೇ ಕರೀಷ್ಮಾ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಹಲವು ಸೀರಿಯಲ್​ಗಳಲ್ಲಿ ಅವರು ನಟಿಸಿದರು. ಈ ಮಧ್ಯೆ ಸಿನಿಮಾ ರಂಗದಲ್ಲೂ ಅವರಿಗೆ ಆಫರ್ ಬಂತು. 2005ರಲ್ಲಿ ತೆರೆಗೆ ಬಂದ ‘ದೋಸ್ತಿ: ಫ್ರೆಂಡ್ಸ್​ ಫಾರೆವರ್​’ ಚಿತ್ರದಲ್ಲಿ ನಟಿಸಿದರು. 2011ರಲ್ಲಿ ತೆರೆಗೆ ಬಂದ ಕನ್ನಡದ ‘ಐ ಆ್ಯಮ್​ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ’ ಚಿತ್ರದಲ್ಲಿ ಪ್ರೇಮ್​ಗೆ ಜತೆಯಾಗಿ ನಟಿಸಿದರು. ರವೀಂದ್ರ ಎಚ್​.ಪಿ. ದಾಸ್​ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದರು.

- Advertisement -

Related news

error: Content is protected !!