Friday, June 5, 2026
spot_imgspot_img
spot_imgspot_img

ನನ್ನ ಭಾಷಣವನ್ನು ತಿರುಚಿ, ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗುತ್ತಿದೆ; ಯಾರನ್ನೂ ನಿಂದಿಸುವ ವ್ಯಕ್ತಿ ನಾನಲ್ಲ, ಸುಳ್ಳು ಸುದ್ದಿ ಹಂಬಿಸುವುದನ್ನು ನಿಲ್ಲಿಸಿ- ಅಶೋಕ್‌ ಕುಮಾರ್‌ ರೈ

- Advertisement -
- Advertisement -

ಪುತ್ತೂರು: ನಾನು ಮಾಡಿರುವ ಭಾಷಣದ ತುಣುಕನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗುತ್ತಿದೆ. ನನ್ನ ಭಾಷಣವನ್ನು ತಿರುಚಿ ಪ್ರಚಾರ ಮಾಡಲಾಗಿದೆ. ಇದನ್ನು ಯಾರೂ ನಂಬುವುದಿಲ್ಲ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದ್ದಾರೆ

‘ಬಿಜೆಪಿಯವರು ಅಕ್ರಮ ಸಕ್ರಮ ಮತ್ತು 94ಸಿ ಯಲ್ಲಿ ಲಂಚ, ಭ್ರಷ್ಟಾಚಾರದ ಕೆಲಸ ಮಾಡುತ್ತಿದ್ದು ಲಂಚ ಭ್ರಷ್ಟಾಚಾರಿಗಳಿಗೆ ಬುದ್ಧಿ ಕಲಿಸುತ್ತೇನೆ ಎಂದು ಹೇಳಿದ್ದು ಇದನ್ನು ತಿರುಚಲಾಗಿದೆ. ಆ ಹೇಳಿಕೆಗೆ ನಾನು ಈಗಲೂ ಬದ್ಧ, ನಾನು ಭಾರತೀಯ ಜನತಾ ಪಕ್ಷ ಅಲ್ಲದೇ ಕಾರ್ಯಕರ್ತನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿಕೊಂಡಿಲ್ಲ, ಹೀಗೆಲ್ಲಾ ಅಪ್ರಚಾರ ಮಾಡುವುದರಿಂದ ಯಾರಿಗೂ ಶೋಭೆ ತರುವುದಿಲ್ಲ ಎಂದು ಅವರು ಹೇಳಿದ್ದಾರೆ.

ನಾನು ಯಾರೆಂದು ಜನರಿಗೆ ಗೊತ್ತಿದೆ. ನಾನು ಯಾರನ್ನೂ ನಿಂದಿಸುವವ ಅಲ್ಲ, ನನ್ನ ಸ್ವಭಾವವೂ ಅದಲ್ಲ. ಸುಳ್ಳು ಸುದ್ದಿ ಹಬ್ಬಿಸುವುದನ್ನು ಇನ್ನಾದರೂ ನಿಲ್ಲಿಸಿ ಎಂದು ಅವರು ಹೇಳಿದರು.ಭ್ರಷ್ಟಾಚಾರಕ್ಕೆ ನಾನು ಯಾವತ್ತೂ ವಿರೋಧ, ನನ್ನದೇನಿದ್ದರೂ ಅಭಿವೃದ್ಧಿ ಪರವಾದ ವಿಚಾರ ಮಾತ್ರ ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.

- Advertisement -

Related news

error: Content is protected !!