Monday, June 15, 2026
spot_imgspot_img
spot_imgspot_img

ನವೆಂಬರ್​ ತಿಂಗಳು ಪೂರ್ತಿ ಕನ್ನಡ ಸಿನಿಮಾಗಳ ಹಬ್ಬ; ರಿಲೀಸ್​ ಆಗುತ್ತಿವೆ ಬಹುನೀರಿಕ್ಷಿತ ಚಿತ್ರಗಳು

- Advertisement -
- Advertisement -


ನವೆಂಬರ್​ ತಿಂಗಳಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಮುಗಿಲ್​ ಪೇಟೆ, 100, ಸಖತ್​, ಗರುಡ ಗಮನ ವೃಷಭ ವಾಹನ ಮುಂತಾದ ಚಿತ್ರಗಳು ನಿರೀಕ್ಷೆ ಮೂಡಿಸಿವೆ.

ನವೆಂಬರ್​ ತಿಂಗಳಲ್ಲಿ ರಿಲೀಸ್​ ಆಗಲಿವೆ ಬಹುನಿರೀಕ್ಷಿತ ಸಿನಿಮಾಗಳು ಕೊರೊನಾ ಎರಡಲೇ ಅಲೆ ಕಾರಣದಿಂದ ಚಿತ್ರರಂಗಕ್ಕೆ ಮಂಕು ಕವಿದಿತ್ತು. ಅನೇಕ ಸಿನಿಮಾಗಳ ಕೆಲಸಗಳು ನಿಂತಲ್ಲೇ ನಿಂತಿದ್ದವು. ಹಲವು ಸ್ಟಾರ್​ ಸಿನಿಮಾಗಳ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತ್ತು. ಆದರೆ ಈಗ ವಾತಾವರಣ ತಿಳಿ ಆಗಿದೆ. ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಹಳೇ ಚಾರ್ಮ್​ ಮರಳುತ್ತಿದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಅದರಲ್ಲೂ ನವೆಂಬರ್​ ತಿಂಗಳಲ್ಲಿ ಕನ್ನಡ ಸಿನಿಪ್ರಿಯರಿಗೆ ವಿಶೇಷ ಸಿನಿಮಾಗಳು ಸಿಗುತ್ತಿವೆ. ಯಾವ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಲಿದ್ದಾರೆ? ಬಾಕ್ಸ್​ ಆಫೀಸ್​ನಲ್ಲಿ ಯಾರಿಗೆ ಗೆಲುವು ಸಿಗಲಿದೆ ಎಂಬ ಕೌತುಕ ಮನೆ ಮಾಡಿದೆ.

ನಟ ‘ನೆನಪಿರಲಿ ಪ್ರೇಮ್​’ ಅಭಿನಯದ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ನ.12ರಂದು ತೆರೆ ಕಾಣುತ್ತಿದೆ. ರಿಷಬ್​ ಶೆಟ್ಟಿ, ರಾಜ್​ ಬಿ. ಶೆಟ್ಟಿ ಜೊತೆಯಾಗಿ ನಟಿಸಿರುವ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ನ.19ರಂದು ಬಿಡುಗಡೆ ಆಗುತ್ತಿದೆ. ‘ಒಂದು ಮೊಟ್ಟೆಯ ಕಥೆ’ ಬಳಿಕ ರಾಜ್​ ಬಿ. ಶೆಟ್ಟಿ ನಿರ್ದೇಶನದ ಸಿನಿಮಾ ಇದಾಗಿರುವುದರಿಂದ ನಿರೀಕ್ಷೆ ಮೂಡಿದೆ.

ರಮೇಶ್​ ಅರವಿಂದ್​ ನಿರ್ದೇಶನ ಮತ್ತು ನಟನೆಯ ‘100’ ಚಿತ್ರ ಬಹಳ ನಿರೀಕ್ಷೆ ಮೂಡಿಸಿದೆ. ಸೈಬರ್​ ಕ್ರೈಂ ಹಿನ್ನೆಲೆಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ರಮೇಶ್​ ಅರವಿಂದ್​ ನಟಿಸಿದ್ದಾರೆ. ನ.19ರಂದು ‘100’ ಚಿತ್ರ ಬಿಡುಗಡೆ ಆಗುತ್ತಿದೆ.

ನಿರ್ದೇಶಕ ಸಿಂಪಲ್​ ಸುನಿ ಮತ್ತು ‘ಗೋಲ್ಡನ್​ ಸ್ಟಾರ್’ ಗಣೇಶ್​ ಕಾಂಬಿನೇಷನ್​ನ ‘ಸಖತ್​’ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ನ.26ರಂದು ಈ ಚಿತ್ರ ರಾಜ್ಯಾದ್ಯಂತ ರಿಲೀಸ್​ ಆಗಲಿದೆ. ಟೀಸರ್​ ಮೂಲಕ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಬಿಡುಗಡೆ ಆಗಿರುವ ‘ಭಜರಂಗಿ 2, ‘ಸಲಗ’, ‘ಕೋಟಿಗೊಬ್ಬ 3’ ಚಿತ್ರಗಳು ಕೂಡ ಹಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿವೆ.

- Advertisement -

Related news

error: Content is protected !!