Monday, April 29, 2024
spot_imgspot_img
spot_imgspot_img

ಕಲ್ಲಡ್ಕ: ನೂತನವಾಗಿ ಪುನರ್ ನಿರ್ಮಾಣಗೊಳ್ಳುತ್ತಿರುವ ಕಲ್ಲಡ್ಕ ಕುದ್ರೆಬೆಟ್ಟು ಶ್ರೀ ಕಲ್ಲುರ್ಟಿ ದೈವಸ್ಥಾನದ ಭೂಮಿ ಪೂಜೆ ಕಾರ್ಯಕ್ರಮ

- Advertisement -G L Acharya panikkar
- Advertisement -
This image has an empty alt attribute; its file name is Bajaj-add-1024x718.jpg

ಕಲ್ಲಡ್ಕ: ಶಿಥಿಲಾವಸ್ಥೆಗೊಂಡು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕಲ್ಲಡ್ಕ ಕುದ್ರೆಬೆಟ್ಟುವಿನ ಶ್ರೀ ಕಲ್ಲುರ್ಟಿ ದೈವಸ್ಥಾನದ ಭೂಮಿ ಪೂಜಾ ಕಾರ್ಯಕ್ರಮ ಅರ್ಚಕರಾದ ಪಳನೀರು ಅನಂತ ಭಟ್ ಅವರ ನೇತೃತ್ವದಲ್ಲಿ ಇಂದು ನಡೆಯಿತು. ಹಾಗೂ ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಲಾಯಿತು.

ಊರಿನ ಭಕ್ತಾಭಿಮಾನಿಗಳು ಸೇರಿ, ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಪುನರ್ ನಿರ್ಮಾಣ ಮಾಡುತ್ತಿರುವ ಶ್ರೀ ಕಲ್ಲುರ್ಟಿ ದೈವಸ್ಥಾನದ ಭೂಮಿ ಪೂಜನ ಕಾರ್ಯಕ್ರಮದಲ್ಲಿ ಜೀಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಏಳ್ತಿಮಾರು, ಅಧ್ಯಕ್ಷರಾದ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಕಾರ್ಯಾಧ್ಯಕ್ಷರಾದ ಗೋಪಾಲ ಮೂಲ್ಯ ನೆಲ್ಲಿ ಶಂಭುಗ, ಪ್ರಧಾನ ಕಾರ್ಯದರ್ಶಿ ರವಿ ಸುವರ್ಣ, ಕೋಶಾಧಿಕಾರಿ ನಿತಿನ್ ಕುದ್ರೆಬೆಟ್ಟು ಹಾಗೂ ಸದಸ್ಯರುಗಳು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣು ಪೂಜಾರಿ, ನಿವೃತ್ತ ಸೈನಿಕ ಚಂದ್ರಶೇಖರ್ ದಾಸಕೋಡಿ, ದಿನೇಶ್ ಅಮ್ಟೂರು, ಸುಲೋಚನಾ ಭಟ್, ಕಟ್ಟೆಮಾರು ಮಂತ್ರ ದೇವತಾ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆ ಮಾರು, ಗೋಪಾಲಕೃಷ್ಣ ಭಟ್ ಕೆಲಿಂಜ, ನಿವೃತ್ತ ಶಿಕ್ಷಕ ನಾರಾಯಣಗೌಡ, ಸಿದ್ದಿ ದೇವತಾ ಸಮಿತಿಯ ಪ್ರಮುಖರಾದ ಕೊರಗಪ್ಪ ಪಂಡಿತ್, ಸಮುದ್ರ ಹೋಟೆಲಿನ ಕರುಣಾಕರ ಶೆಟ್ಟಿ, ಪ್ರವೀಣ್ ಶೆಟ್ಟಿ, ಜನಶಕ್ತಿ ಸೇವಾ ಟ್ರಸ್ಟ್ (ರಿ) ಅಧ್ಯಕ್ಷ ಜಿನ್ನಪ್ಪ ಏಳ್ತಿಮಾರು, ಕಾರ್ಯದರ್ಶಿ ಸೀತಾರಾಮ್ ಧರ್ಮದ ಬಳ್ಳಿ, ಬೋಜರಾಜ ಕುದ್ರೆಬೆಟ್ಟು ಹಾಗೂ ಸದಸ್ಯರಾದ ಶ್ರೀ ಮಣಿಕಂಠ ಯುವಶಕ್ತಿ (ರಿ.) ಅಧ್ಯಕ್ಷ ಲೋಕನಂದ ಏಳ್ತಿಮಾರ್ ಹಾಗೂ ಶ್ರೀ ಮಣಿಕಂಠ ಮಾತೃ ಶಕ್ತಿಯ ಅಧ್ಯಕ್ಷರು, ಪದಾಧಿಕಾರಿಗಳು ಸರ್ವ ಸದಸ್ಯರು, ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!