Monday, May 6, 2024
spot_imgspot_img
spot_imgspot_img

ಪಣೋಲಿಬೈಲು ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಬಳಿ ಮೊದಲ ಬಾರಿಗೆ ಹೂವಿನ ಅಂಗಡಿಗೆ ತುಳು ಲಿಪಿಯ ನಾಮಫಲಕ ಅಳವಡಿಕೆ

- Advertisement -G L Acharya panikkar
- Advertisement -
driving

ಬಂಟ್ವಾಳ: ಕಾರಣಿಕ ಪ್ರಸಿದ್ಧ ಕಲ್ಕುಡ ಕಲ್ಲುರ್ಟಿ ಕ್ಷೇತ್ರ ಪಣೋಲಿಬೈಲು ದೈವಸ್ಥಾನ ಸಜಿಪ ಗ್ರಾಮ ಇಲ್ಲಿ ಮೊದಲ ಬಾರಿಗೆ ಹೂವಿನ ಅಂಗಡಿಯ ನಾಮ ಫಲಕವನ್ನು ತುಳು ಲಿಪಿಯಲ್ಲಿ ಹಾಕುವ ಮೂಲಕ ತುಳು ಭಾಷೆಯ ಮೇಲಿನ ಪ್ರೀತಿಯನ್ನು ಅಂಗಡಿ ಮಾಲೀಕರು ತೋರ್ಪಡಿಸಿದ್ದಾರೆ.

ತುಳುನಾಡ ಯುವಸೇನೆ ಬಂಟ್ವಾಳ ಇವರ ಮನವಿ ಮೇರೆಗೆ ಅಂಗಡಿ ಮಾಲೀಕರಾದ ರವೀಂದ್ರ ಕುಲಾಲ್ ಹಾಗೂ ಶ್ರೀಮತಿ ಯೋಗಿನಿ ರವೀಂದ್ರ ಕುಲಾಲ್ ತಮ್ಮ ಹೂವಿನ ಅಂಗಡಿಗೆ ತುಳು ಲಿಪಿಯ ನಾಮ ಫಲಕವನ್ನು ಹಾಕಿಸಿದ್ದಾರೆ.

ಇಂದು ನಾಮಫಲಕದ ಅನಾವರಣ ಸಮಾರಂಭವನ್ನು ಸಜಿಪ ಗ್ರಾಮ ಪಂಚಾಯಿತಿ ಸದಸ್ಯರಾದ ಸೀತಾರಾಮ ಸಜಿಪ ಹಾಗೂ ಲಯನ್ ರಮೇಶ್ ಕುಲಾಲ್ ಪಣೋಲಿಬೈಲು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತುಲುನಾಡ ಯುವಸೇನೆ ಯ ಉಪಾಧ್ಯಕ್ಷರಾದ ಪ್ರತೀಕ್ ತುಳುವೆ, ಖಜಾಂಚಿಯಾದ ಧೀರಜ್ ಕೋಟ್ಯಾನ್, ಸಹ ಕಾರ್ಯದರ್ಶಿಯಾದ ಲಿಖಿತ್ ರಾಜ್ ಸೆರ್ಕಳ ಹಾಗೂ ಸಂಘದ ಸದಸ್ಯರಾದ ರಿತೇಶ್ ಕುಲಾಲ್, ಶರಣ್ ಪಚ್ಚಿನಡ್ಕ ,ಅರುಣ್ ಕುಮಾರ್ ಹಾಗೂ ಸ್ಥಳೀಯರಾದ ನಾರಾಯಣ ಕುಲಾಲ್ ಪಣೋಲಿಬೈಲು, ಯೋಗಿಶ್ ಪೂಜಾರಿ ಪಣೋಲಿಬೈಲು, ಸುರೇಶ್ ಕುಲಾಲ್ ಪಣೋಲಿಬೈಲು, ಸತೀಶ್ ಕುಲಾಲ್ ಪಣೋಲಿಬೈಲು, ಪದ್ಮನಾಭ ಪೂಜಾರಿ ಪಣೋಲಿಬೈಲು ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಲಿಖಿತ್ ರಾಜ್ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!