Tuesday, April 30, 2024
spot_imgspot_img
spot_imgspot_img

ಪತ್ನಿಗೆ ಏಕಾಏಕಿ ತ್ರಿವಳಿ ತಲಾಖ್ ಕೊಟ್ಟ ಯುಸೂಫ್; ಎರಡನೇ ಮದುವೆ ವಿಚಾರ ತಿಳಿದ ಪತ್ನಿಯಿಂದ ದೂರು ದಾಖಲು.!

- Advertisement -G L Acharya panikkar
- Advertisement -

ಉಡುಪಿ: ಸುಮಾರು 15 ವರ್ಷಗಳ ಕಾಲ ಸಂಸಾರ ನಡೆಸಿದ ಮೊದಲನೇ ಹೆಂಡತಿಗೆ ಏಕಾಏಕಿ ತ್ರಿಬಲ್ (ತ್ರಿವಳಿ) ತಲಾಖ್ ಕೊಟ್ಟು, ಎರಡನೇ ಮದುವೆಯಾದ ಪ್ರಕರಣ ನಡೆದಿದ್ದು, ಈ ಬಗ್ಗೆ ತನಗೆ ಮೋಸ ಮಾಡಿದ ತನ್ನ ಗಂಡ ಮತ್ತು ಆತನ ಮನೆಯವರ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ನೊಂದ ಮಹಿಳೆ ದೂರು ದಾಖಲು ಮಾಡಿದ್ದಾರೆ.

ತ್ರಿಬಲ್ ತಲಾಖ್ ನೀಡಿದ ಆರೋಪಿ ಮೊಹಮ್ಮದ್ ಯುಸೂಫ್ ಎಂದು ತಿಳಿದು ಬಂದಿದೆ. ಉಡುಪಿ ಅಂಬಾಗಿಲಿನ ಮಹಿಳೆಯ ವಿವಾಹವು 01/01/2006 ರಂದು ಆರೋಪಿತನಾದ ಮೊಹಮ್ಮದ್ ಯುಸೂಫ್’ನೊಂದಿಗೆ ನಡೆದಿತ್ತು. ವಿವಾಹದ ನಂತರ ಇಬ್ಬರೂ ಸ್ವಲ್ಪ ವರ್ಷಗಳ ವರೆಗೆ ಅನ್ಯೋನ್ಯವಾಗಿದ್ದರು. ಈ ಸಂದರ್ಭ ಇವರಿಗೆ ಗಂಡು ಮಗುವಿನ ಜನನವಾಗಿದ್ದು ಆನಂತರ ಆರೋಪಿ ಮೊಹಮ್ಮದ್ ಯುಸೂಫ್ ಪತ್ನಿಗೆ ಹಣ ತೆಗೆದುಕೊಂಡು ಬಾ, ಇಲ್ಲದಿದ್ದಲ್ಲಿ ನಿನಗೆ ನಮ್ಮ ಮನೆಯಲ್ಲಿ ಜಾಗ ಇಲ್ಲ ಎಂದು ಪೀಡಿಸಿ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ.

Rajya Sabha passes the historic Triple Talaq Bill, practice will now carry  3-year jail term

ಈತನ ಹಿಂಸೆಗೆ ಮನನೊಂದಿದ್ದ ಮಹಿಳೆ ತನ್ನ ತಂದೆ ಮನೆಯಲ್ಲೇ ವಾಸವಾಗಿದ್ದಳು. ಫೆ 25, 2022 ರಂದು ಆರೋಪಿ ಮೊಹಮ್ಮದ್ ಯುಸೂಫ್ ಮಹಿಳೆಯ ತಂದೆಯನ್ನು ಬೇಟಿ ಮಾಡಿ ನಿಮ್ಮ ಮಗಳಿಗೆ ತ್ರಿಬಲ್ ತಲಾಖ್ ನೀಡುತ್ತಿದ್ದೇನೆ. ನಾನು ಕ್ರಷ್ಣಾಪುರದ ಝೀನತ್ ನೊಂದಿಗೆ ಬೇರೆ ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇದೀಗ ತನಗೆ ತ್ರಿಬಲ್ ತಲಾಕ್ ಮೂಲಕ ಮೋಸ ಆಗಿದೆ ಇದಕ್ಕೆ ಆರೋಪಿ ಮೊಹಮ್ಮದ್ ಯುಸೂಫ್ ಮತ್ತು ಅವನಿಗೆ ಎರಡನೇ ಮದುವೆಗೆ ಸಹಕರಿಸಿದ ಆತನ ತಮ್ಮ ಅಲ್ತಾಫ್, ಸಿರಾಜ್, ಆಯಿಷಾ, ನಫೀಸಾ, ಹಸನ್ ಮತ್ತು ಝೀನತ್ ವಿರುದ್ಧ ದೂರು ನೀಡಿದ್ದು, ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TRIPLE TALAQ: A CRITICAL ANALYSIS | RACOLB LEGAL
- Advertisement -

Related news

error: Content is protected !!