Sunday, November 1, 2026
spot_imgspot_img
spot_imgspot_img

ಪತ್ನಿಯ ಅಕ್ರಮ ಸಂಬಂಧಕ್ಕೆ ಮನನೊಂದ ಪತಿ; ಫೇಸ್ ಬುಕ್ ಲೈವ್ ನಲ್ಲಿ ಸಂಕಟ ತೋಡಿಕೊಂಡು ಆತ್ಮಹತ್ಯೆಗೆ ಶರಣು.!

- Advertisement -
- Advertisement -

ವಿಜಯಪುರ: ಪತ್ನಿ ತನ್ನ ಸಂಬ0ಧಿಯೊ0ದಿಗೆ ಅಕ್ರಮ ಸಂಬ0ಧ ಹೊಂದಿರುವುದು ತಿಳಿಯುತ್ತಿದ್ದಂತೆ ಮನ ನೊಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ವೆಂಕಟೇಶ್ ದ್ವಾರನಹಳ್ಳಿ(25) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪತ್ನಿಯು ತನ್ನ ದಾಯಾದಿ ಸಹೋದರ ಶ್ರೀಶೈಲ್ ಎಂಬುವವನ ಜೊತೆ ಅಕ್ರಮ ಸಂಬ0ಧ ಇಟ್ಟುಕೊಂಡಿದ್ದಳು. ಅಷ್ಟೇ ಅಲ್ಲದೇ ಆತನೊಂದಿಗೆಯೇ ವಾಸವಾಗಿದ್ದಳು ಎನ್ನಲಾಗಿದೆ.

ಮೃತ ವೆಂಕಟೇಶ್ ತಾಳಿಕೋಟೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದನು. ಆದರೆ ಪತ್ನಿ ತಾನು ವೆಂಕಟೇಶ್ ಜೊತೆ ಇರಲ್ಲ, ಪ್ರಿಯಕರ ಶ್ರೀಶೈಲ್ ಜೊತೆಯೇ ಇರುವುದಾಗಿ ಹೇಳಿಕೆ ನೀಡಿದ್ದಳಂತೆ. ತಾನು ಪ್ರೀತಿಸಿ ವಿವಾಹವಾಗಿದ್ದ ಹೆಂಡತಿ ಈಗ ತನ್ನ ದಾಯಾದಿಯೊಂದಿಗೆ ಇರುವುದಾಗಿ ಹೇಳುತ್ತಿರುವುದನ್ನು ಕೇಳಿ ವೆಂಕಟೇಶ್ ಮನನೊಂದಿದ್ದಾನೆ. ಫೇಸ್ ಬುಕ್ ಲೈವ್ ನಲ್ಲಿ ತನ್ನ ಸಂಕಟ ತೋಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತನ ಫೇಸ್ ಬುಕ್ ಲೈವ್ ವಿಡಿಯೋ ನೋಡುತ್ತಿದ್ದಂತೆ ವೆಂಕಟೇಶ್ ನ ಸ್ನೇಹಿತರು ಆತನನ್ನು ಹುಡುಕಿಕೊಂಡು ಬಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ವೆಂಕಟೇಶ್ ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.

- Advertisement -

Related news

error: Content is protected !!