Thursday, May 9, 2024
spot_imgspot_img
spot_imgspot_img

ಪಪ್ಪಾಯಿಯನ್ನು ಇದರೊಂದಿಗೆ ತಿಂದರೆ ದೇಹಕ್ಕೆ ವಿಷಕಾರಿಯಾಗಬಹುದು

- Advertisement -G L Acharya panikkar
- Advertisement -

ಪಪ್ಪಾಯಿ ಹಣ್ಣು ರುಚಿಕರವಾಗಿದ್ದು, ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಮಧುಮೇಹ ಇರುವ ವ್ಯಕ್ತಿಗಳಿಗೆ ಪಪ್ಪಾಯಿ ಹಣ್ಣನ್ನು ತಿನ್ನಲು ಶಿಫಾರಾಸು ಮಾಡಲಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ತೂಕ ಇಳಿಸಲು ಸಹಕಾರಿಯಾಗಿದೆ.

ವಿಟಮಿನ್ ಎ, ಸಿ, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಈ ಹಣ್ಣಿನ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆದರೆ ಈ ಸಾಮಾನ್ಯ ಹಣ್ಣನ್ನು ಒಂದು ಆಹಾರದೊಂದಿಗೆ ಸೇವಿಸಿದರೆ ವಿಷಕಾರಿ ಮತ್ತು ಮಾರಕವಾಗಬಹುದು ಎಂದು ನಿಮಗೆ ತಿಳಿದಿದೆಯೇ? ಪಪ್ಪಾಯಿ ಮತ್ತು ಅದರ ಅಪಾಯಕಾರಿ ಪರಿಣಾಮಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.

​ಪ್ರತಿನಿತ್ಯ ಪಪ್ಪಾಯಿ ಸೇವನೆ ಒಳ್ಳೆಯದು

ಹೆಚ್ಚಿನ ಫಿಟ್ನೆಸ್ ತಜ್ಞರು ಪಪ್ಪಾಯಿ ಹಣ್ಣನ್ನು ದೈನಂದಿನ ಸೇವನೆಗೆ ಸೂಚಿಸುತ್ತಾರೆ ಏಕೆಂದರೆ ಇದರಲ್ಲಿ ಆಹಾರದ ಫೈಬರ್ ಮತ್ತು ಮಧ್ಯಮ ಗ್ಲೈಸೆಮಿಕ್ ಇಂಡೆಕ್ಸ್ 60 ರಷ್ಟಿದೆ, ಇದು ಮಧುಮೇಹಿಗಳಿಗೆ ಒಳ್ಳೆಯದು. ಈ ಸಿಹಿಯಾದ ಹಣ್ಣು ಪಪೈನ್ ಎಂಬ ಕಿಣ್ವದಿಂದ ತುಂಬಿರುತ್ತದೆ. ಇದು ಅಲರ್ಜಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಗಾಯಗಳನ್ನು ಗುಣಪಡಿಸುತ್ತದೆ. ಇಷ್ಟೆಲ್ಲಾ ಗುಣಗಳಿರುವ ಈ ಹಣ್ಣನ್ನು ಈ ಸಾಮಾನ್ಯ ಆಹಾರದೊಂದಿಗೆ ಸೇವಿಸಿದರೆ ಪಪ್ಪಾಯಿ ವಿಷಕಾರಿಯಾಗಬಹುದು.

​ನಿಂಬೆರಸದೊಂದಿಗೆ ಮಿಕ್ಸ್‌ ಮಾಡಬೇಡಿ

ನೀವು ಪಪ್ಪಾಯಿಯನ್ನು ಸಲಾಡ್‌ಗೆ ಬಳಸುತ್ತಿದ್ದರೆ, ನಿಂಬೆರಸ ಮಿಕ್ಸ್‌ ಆಗದಂತೆ ನೋಡಿಕೊಳ್ಳಿ. ಸಾಮಾನ್ಯವಾಗಿ ಸಲಾಡ್‌ಗಳಿಗೆ ನಿಂಬೆ ರಸವನ್ನು ಸೇರಿಸುತ್ತಾರೆ ಅದು ನಿಜವಾಗಿಯೂ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನುಂಟುಮಾಡುತ್ತದೆ. ನಿಂಬೆ ಮತ್ತು ಪಪ್ಪಾಯಿ ಒಟ್ಟಿಗೆ ವಿಷಕಾರಿಯಾಗುತ್ತವೆ ಮತ್ತು ರಕ್ತಹೀನತೆ ಮತ್ತು ಹಿಮೋಗ್ಲೋಬಿನ್ ಅಸಮತೋಲನಕ್ಕೆ ಕಾರಣವಾಗಬಹುದು. ಇದು ಮಕ್ಕಳು ಮತ್ತು ವಯಸ್ಕರಿಗೆ ಅಪಾಯಕಾರಿಯಾಗಬಹುದು. ಆದ್ದರಿಂದ, ಈ ಸಂಯೋಜನೆಯನ್ನು ತಪ್ಪಿಸಲು ಸೂಚಿಸಲಾಗುತ್ತದೆ.

​ಪ್ರತ್ಯೇಕವಾಗಿ ಸೇವಿಸುವುದು ಒಳ್ಳೆಯದು

ನಿಂಬೆಹಣ್ಣು ಹಾಗೂ ಪಪ್ಪಾಯಿ ಹಣ್ಣು ಎರಡೂ ಅದರದ್ದೇ ಆದ ಕೆಲವು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಇವುಗಳನ್ನು ಬೇರೆ ಬೇರೆಯಾಗಿ ಬೇರೆ ಬೇರೆ ಸಮಯದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಲಾಭವಿದೆ. ಅದೇ ಒಟ್ಟಿಗೆ ಸೇರಿಸಿ ತಿನ್ನುವುದರಿಂದ ವಿಷಕಾರಿಯಾಗಬಹುದು. ಹಾಗಾಗಿ ಇವುಗಳನ್ನು ಒಟ್ಟಿಗೆ ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು.

​ತಿನ್ನುವ ಮೊದಲು ಇದನ್ನು ತಿಳಿಯಿರಿ

ಪಪ್ಪಾಯಿಯನ್ನು ಸೇವಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇತರ ಕೆಲವು ಮುನ್ನೆಚ್ಚರಿಕೆಗಳು ಇಲ್ಲಿವೆ. ಸರಾಸರಿ ಒಂದು ಬೌಲ್ ಪಪ್ಪಾಯಿ ಅಥವಾ 3 ತೆಳುವಾದ ಹೋಳುಗಳು ನಿಮ್ಮ ದೇಹಕ್ಕೆ ಸರಿಯಾದ ಪ್ರಮಾಣದ ಪೌಷ್ಟಿಕಾಂಶವನ್ನು ನೀಡಲು ಸಾಕು. ಪಪ್ಪಾಯಿ ಇಷ್ಟ ಎಂದು ಅತಿಯಾಗಿ ಸೇವಿಸಿದರೆ ಹಾನಿಕಾರಕವಾಗುವುದು. ಪಪ್ಪಾಯಿಯಲ್ಲಿ ಪಪೈನ್ ಎಂಬ ಕಿಣ್ವವಿರುವುದರಿಂದ ಅಲರ್ಜಿ ಇರುವವರಲ್ಲಿ ಊತ, ತಲೆತಿರುಗುವಿಕೆ, ತಲೆನೋವು, ದದ್ದುಗಳಂತಹ ಅಲರ್ಜಿಗಳು ಉಂಟಾಗಬಹುದು.

​ಗರ್ಭಿಣಿಯರು ಕಾಯಿ ಪಪ್ಪಾಯಿ ತಿನ್ನದಿರಿ

ಕಾಯಿ ಪಪ್ಪಾಯಿಯಲ್ಲಿರುವ ಲ್ಯಾಟೆಕ್ಸ್ ಅನ್ನು ಗರ್ಭಿಣಿಯರು ತಪ್ಪಿಸಬೇಕು . ಇದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸಬಹುದು, ಇದು ಪ್ರಸವಪೂರ್ವ ಹೆರಿಗೆಗೂ ಕಾರಣವಾಗುತ್ತದೆ.

- Advertisement -

Related news

error: Content is protected !!