

ಧರ್ಮ ದೈವ ತಂಡದ ಹೊಸ ಚಿತ್ರ ಪರಿಣಿತದ ಮೊದಲ ನೋಟ ಬಿಡುಗಡೆಗೊಂಡಿದ್ದು, ಚಿತ್ರದ ನಟ ಅಕ್ಷಯ್ ರೈ ಅವರ ಮೊದಲ ನೋಟ ಎಲ್ಲರ ಗಮನ ಸೆಳೆದಿದೆ.
ರಿದ್ವಿ ಕ್ರಿಯೆಷನ್ ಅಡಿಯಲ್ಲಿ ಸುಧೀರ್ ಮತ್ತು ಕವಿತಾ ಸುಧೀರ್ ನಿರ್ಮಾಣಮಾಡುತ್ತಿರುವ ಪರಿಣಿತ ಚಿತ್ರವನ್ನು ನಿತಿನ್ ರೈ ಕುಕ್ಕುವಳ್ಳಿ ಕಥೆ ಬರೆದು ನಿರ್ದೇಶಿಸುತ್ತಿದ್ದು, ಹಮೀದ್ ಪುತ್ತೂರು ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ.

ಚಿತ್ರದ ಮೂರು ಪ್ರಮುಖ ವಿಭಾಗವನ್ನು ಧನು ರೈ ನಿರ್ವಹಿಸುತ್ತಿದ್ದು, ನಿತಿನ್ ಕಾನಾವು ಟೈಟಲ್ ಡಿಸೈನ್ ಮಾಡಿದ್ದಾರೆ. ಧರ್ಮ ದೈವ ತಂಡದ ಬಹುತೇಕ ತಾಂತ್ರಿಕ ವರ್ಗ ಈ ಚಿತ್ರದಲ್ಲಿ ಕೆಲಸ ನಿರ್ವಹಿಸುತ್ತಿದೆ. ಮೂಲತಃ ಇಂಜಿನಿಯರ್ ಆಗಿರುವ ಅಕ್ಷಯ್ ರೈ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿದ್ದು ನಾಯಕಿಯ ಬಗ್ಗೆ ಚಿತ್ರ ತಂಡ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ.
ನಟ ಸುಂದರ್ ರೈ ಮಂದಾರ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಸಂಪೂರ್ಣ ನಿರ್ವಹಣಾ ಕೆಲಸವನ್ನು ಸುಧಾಕರ್ ಪಡೀಲ್,ಕೌಶಿಕ್ ರೈ ತೋಟ ನಿರ್ವಹಿಸುತ್ತಿದ್ದೂ ತಂಡಕ್ಕೆ ಕೆಲವೊಂದು ಹೊಸ ಮುಖಗಳು ಸೇರಿಕೊಂಡಿವೆ. ಧರ್ಮ ದೈವ ಮತ್ತು ಆಕೆ ಮೋಹಿನಿ ಎಂಬ ವಿಭಿನ್ನ ಚಿತ್ರ ನೀಡಿ ಗಮನ ಸೆಳೆದ ತಂಡ ಪರಿಣಿತ ಮೊದಲ ನೋಟ ಮೂಲಕ ನಿರೀಕ್ಷೆ ದುಪ್ಪಟ್ಟು ಮಾಡಿದೆ.
- ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ‘ಗ್ರಾಮೋತ್ಸವ-2026’
- ಪುತ್ತೂರಿನಲ್ಲಿ ಆ. 7 ರಂದು ನಡೆಯಲಿರುವ ಬೃಹತ್ ತಿರಂಗಾ ಯಾತ್ರೆ
- ಸೋನಿಪತ್ನಲ್ಲಿ ಮನಕಲಕುವ ಘಟನೆ: ಕೋಟ್ಯಾಧಿಪತಿ ಉದ್ಯಮಿ ಸಾವು – ಅಂತ್ಯಕ್ರಿಯೆಗೂ ಬಾರದ ಪುತ್ರಿಯರು
- ಕರಾವಳಿಗರ ಬಹುದಿನಗಳ ಕನಸು ನನಸಾಗುತ್ತಿದೆ:ಆಗಸ್ಟ್ 11ರಿಂದ ಬೆಂಗಳೂರು-ಮಂಗಳೂರು ‘ವಂದೇ ಭಾರತ್’ ರೈಲು ಪ್ರಾಯೋಗಿಕ ಸಂಚಾರ..!
- ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿ ಸುಳ್ಯದ ಉಮರ್ ಫಾರೂಕ್ ಅರೆಸ್ಟ್










